ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕೋಡಿ ಬಿಇಒ ಅವರಿಗೆ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ಮನವಿ ಸಲ್ಲಿಕೆ

​ಚಿಕ್ಕೋಡಿ: ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚಿಕ್ಕೋಡಿ ತಾಲೂಕು ಘಟಕದ ವತಿಯಿಂದ ಶಿಕ್ಷಣಾಧಿಕಾರಿಗಳಾದ ಪ್ರಭಾವತಿ ಪಾಟೀಲಯವರಿಗೆ ಶಿಕ್ಷಕರ ವಿವಿಧ ಬೇಡಿಕೆ ಹಾಗೂ ಸಮಸ್ಯೆಗಳ ಕುರಿತು ಮನವಿ ಸಲ್ಲಿಸಲಾಯಿತು.

​KAAMS ಹಾಜರಾತಿ ವ್ಯವಸ್ಥೆಯ ತಾಂತ್ರಿಕ ಸಮಸ್ಯೆಗಳನ್ನು ಶೀಘ್ರವಾಗಿ ಬಗೆಹರಿಸಿ, ವಲಯಾದ್ಯಂತ ಏಕರೂಪದ ವೇಳಾಪಟ್ಟಿ ಜಾರಿಗೊಳಿಸಬೇಕು. ಶಿಕ್ಷಕರ ವೇತನವನ್ನು ಪ್ರತಿ ತಿಂಗಳ ೧ನೇ ತಾರೀಖಿನಂದೇ ಪಾವತಿಸಬೇಕು. ಹಿರಿಯ ಮುಖ್ಯೋಪಾಧ್ಯಾಯರಾಗಿ ಬಡ್ತಿ ಪಡೆದವರಿಗೆ ಕಳೆದ ನಾಲ್ಕು ತಿಂಗಳಿಂದ ಬಾಕಿ ಇರುವ ವೇತನ ಬಡ್ತಿಯನ್ನು ತಕ್ಷಣ ಮಂಜೂರು ಮಾಡಬೇಕು.ಮಕ್ಕಳ ಶೈಕ್ಷಣಿಕ ಹಿತದೃಷ್ಟಿಯಿಂದ, ಏಕೋಪಾಧ್ಯಾಯ ಶಾಲೆಗಳ ಶಿಕ್ಷಕರನ್ನು ಬಿ.ಎಲ್.ಓ (BLO) ಕರ್ತವ್ಯದಿಂದ ಮುಕ್ತಗೊಳಿಸಬೇಕು.

​ಮಧ್ಯಾಹ್ನ ಉಪಹಾರ ಯೋಜನೆ ತಾಲೂಕು ಅಧಿಕಾರಿ ಎಂ.ಟಿ. ಜನಗೌಡ ಅವರ ಉಪಸ್ಥಿತಿಯಲ್ಲಿ, ವಲಯದ ಎಲ್ಲಾ ಮುಖ್ಯೋಪಾಧ್ಯಾಯರಿಗೆ ಒಂದು ದಿನದ ಆಡಳಿತಾತ್ಮಕ ಸಭೆ ಹಮ್ಮಿಕೊಳ್ಳಬೇಕು ಸೇರಿದಂತೆ ವಿವಿಧ ‌ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಸಲ್ಲಿಸಿದರು.

​ಈ ಸಂದರ್ಭದಲ್ಲಿ ತಾಲೂಕು ಸಂಘದ ಪಿ.ಡಿ. ಮಜಲಟ್ಟಿ, ಕಾರ್ಯದರ್ಶಿ ಎಸ್.ಎ. ಖಡ್ಡ, ಜಿಲ್ಲಾ ಅಧ್ಯಕ್ಷ ರಾಜು ಕಾಮತ, ಪದಾಧಿಕಾರಿಗಳಾದ ಎನ್.ಜಿ. ಪಾಟೀಲ, ಡಿ.ಆರ್. ಚಲವಾದಿ, ಡಿ.ಎಚ್. ಕಾಂಬಳೆ, ಆರ್.ಕೆ. ಕಾಂಬಳೆ, ಸಿ.ಎಲ್. ಯಾದಗುಡೆ, ಎಸ್.ಎಂ. ಮಾನೆ, ಎಂ.ಎಸ್. ಕೋಳಿ, ಎಸ್.ವಿ. ಕುಂಬಾರ, ಎಸ್.ಯಾದವ್ ಮುಗಳಿ, ಅಜಿತ ಹುಣಶ್ಯಾಳೆ ಸೇರಿದಂತೆ ಹಲವು ಶಿಕ್ಷಕರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

05/06/2026 10:03 pm

Cinque Terre

2.28 K

Cinque Terre

0

ಸಂಬಂಧಿತ ಸುದ್ದಿ