ಕೊಪ್ಪಳ : ನಕಲಿ ಬಂಗಾರ ನೀಡಿ 10 ಲಕ್ಷ ರೂಪಾಯಿ ಹಣ ದೋಚಿಪರಾರಿಯಾಗಿದ್ದ ಇಬ್ಬರು ಅಂತರಾಜ್ಯ ಆರೋಪಿಗಳನ್ನ ಬಂಧಿಸುವಲ್ಲಿ, ಮುಳಬಾಗಿಲು ನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಮೇ 17 ರಂದು ಮುಳಬಾಗಿಲು ನಗರದ ಪ್ರವಾಸಿ ಮಂದಿರ ಎದುರು ತಮಿಳುನಾಡು ರಾಜ್ಯದ ತಂಜಾವೂರು ಮೂಲದ ವ್ಯಕ್ತಿ ರಮೇಶ್ ಎಂಬುವರಿಗೆ, ನಕಲಿ ಬಂಗಾರದ ಗುಂಡುಗಳು ನೀಡಿ 10 ಲಕ್ಷ ರೂಪಾಯಿ ಪಡೆದು ವಂಚಿಸಲಾಗಿತ್ತು, ಈ ಬಗ್ಗೆ ಮುಳಬಾಗಿಲು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು, ಈ ಸಂಬಂಧ ಆರೋಪಿಗಳನ್ನು ಪತ್ತೆಹಚ್ಚಲು ವಿಶೇಷ ತಂಡವನ್ನು ರಚನೆ ಮಾಡಲಾಗಿತ್ತು, ಆಂಧ್ರದ ಅನ್ನಮಯ್ಯ ಜಿಲ್ಲೆಯ ಪುಂಗನೂರಿನಲ್ಲಿ ಆರೋಪಿಗಳಾದ ಅರ್ಜುನ್ ಹಾಗೂ ಸಿಂಹಾದ್ರಿ ಎಂಬ ಇಬ್ಬರನ್ನ ಬಂಧಿಸಿದ್ದು, ಬಂಧಿತರಿಂದ 10 ಲಕ್ಷ ರೂಪಾಯಿ ನಗದು ಹಾಗೂ ಒಂದು ಕಾರು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.
Kshetra Samachara
06/06/2026 12:51 pm
LOADING...