ಕೊಪ್ಪಳ: ಕಟಾವಿಗೆ ಬಂದ ಟೊಮೆಟೊ ನಾಶಪಡಿಸಿ ಕಿಡಿಗೇಡಿಗಳು ವಿಕೃತಿ ಮೆರೆದಿದ್ದಾರೆ. ಕೊಪ್ಪಳ ಮೂಲದ ರೈತ ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿ ಬೆಳೆದಿದ್ದ ಟೊಮೆಟೊ ಬೆಳೆಯನ್ನ, ಕಿಡಿಗೇಡಿಗಳು ನಾಶಪಡಿಸಿರೋ ಘಟನೆ, ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಆನೇಪಲ್ಲಿ ಗ್ರಾಮದಲ್ಲಿ ನಡೆದಿದೆ.
ಶ್ರೀನಿವಾಸ ಎನ್ನುವ ರೈತ 38 ಗುಂಟೆ ಜಾಗದಲ್ಲಿ ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿ, ಟೊಮೆಟೊ ಬೆಳೆದಿದ್ದಾರೆ. ಈಗಾಗಲೇ ಟೊಮೆಟೊ ಕಟಾವಿಗೂ ಬಂದಿದ್ದು, ಇನ್ನೆರಡು ದಿನದಲ್ಲಿ ಮಾರುಕಟ್ಟೆಗೆ ಟೊಮೆಟೊ ಮಾರಾಟ ಮಾಡುವ ಉದ್ದೇಶವನ್ನು ರೈತ ಶ್ರೀನಿವಾಸ್ ಹೊಂದಿದ್ದ. ಆದರೆ ಕಿಡಿಗೇಡಿಗಳು ವೈಷಮ್ಯದಿಂದ ದುರುದ್ದೇಶದಿಂದ ಟೊಮೆಟೊ ಗಿಡಗಳನ್ನ ಕಿತ್ತು ಬಿಸಾಡಿದ್ದು, ಟೊಮೆಟೊ ಕಡ್ಡಿಗಳ ಸಮೇತ ಗಿಡಗಳನ್ನೇ ಕಿತ್ತು ಬಿಸಾಡಿ ವಿಕೃತಿ ಮೆರೆದಿದ್ದಾರೆ.
ಈ ಸಂಬಂಧ ರಾಯಲ್ಪಾಡು ಪೊಲೀಸ್ ಠಾಣೆಗೆ ರೈತ ಶ್ರೀನಿವಾಸ್ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
PublicNext
06/06/2026 06:22 pm
LOADING...