ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಂಗಕರ್ಮಿ ಎಂ.ಎಸ್. ಕೊಟ್ರೇಶ ಅವರಿಗೆ ರಾಜಮಾರ್ಗ ಪ್ರಶಸ್ತಿ ಪ್ರದಾನ

ಧಾರವಾಡ: ಹಿರಿಯ ರಂಗಕರ್ಮಿ ಎಂ.ಎಸ್. ಕೊಟ್ರೇಶ ಅವರಿಗೆ ರಾಜಮಾರ್ಗ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಧಾರವಾಡ ಕರ್ನಾಟಕ ವಿದ್ಯಾವರ್ಧಕ ಸಂಘದ ರಾ.ಹ. ದೇಶಪಾಂಡೆ ಸಭಾಂಗಣದಲ್ಲಿ ಶನಿವಾರ ನಡೆದ ಡಾ.ವೀರಣ್ಣ ರಾಜೂರ ದತ್ತಿ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರಶಸ್ತಿ ಸ್ವೀಕರಿಸಿದ ಎಂ.ಎಸ್. ಕೊಟ್ರೇಶ ಮಾತನಾಡಿ, ರಂಗಭೂಮಿ ಮನುಷ್ಯನನ್ನು ಮಹಾದೇವನನ್ನಾಗಿ ಮಾಡುತ್ತದೆ, ಕಿಂಕರನನ್ನು ಶಂಕರನನ್ನಾಗಿ ಮಾಡುತ್ತದೆ. ರಂಗಭೂಮಿಯಲ್ಲಿ ಸೇವೆ ಮಾಡುವ ಅವಕಾಶ ಲಭಿಸಿದ್ದೇ ನನ್ನ ಪುಣ್ಯ ಎಂದರು.

ಕಾರ್ಯಕ್ರಮದಲ್ಲಿ ಹಿರಿಯ ರಂಗ ಕಲಾವಿದ ಪ್ರಭು ಹಂಚಿನಾಳ ಹಾಗೂ ರೇವಣಸಿದ್ದಪ್ಪ ನೂಲ್ವಿ ಅವರಿಗೆ ರಂಗ ಗೌರವ ಪ್ರಶಸ್ತಿ ನೀಡಲಾಯಿತು. ಈ ವೇಳೆ ಹಿರಿಯ ಸಾಹಿತಿ ಡಾ.ಬಾಳಣ್ಣ ಶೀಗಿಹಳ್ಳಿ, ಡಾ.ವೀರಣ್ಣ ರಾಜೂರ, ಮಾಜಿ ಮಹಾಪೌರ ಡಾ.ಪಾಂಡುರಂಗ ಪಾಟೀಲ, ಡಾ.ಧನವಂತ ಹಾಜವಗೋಳ, ಡಾ.ವಿಜಯಲಕ್ಷ್ಮೀ ಅಮರಶೆಟ್ಟಿ ಸೇರಿದಂತೆ ಇತರರಿದ್ದರು.

Edited By : Nagaraj Tulugeri
Kshetra Samachara

Kshetra Samachara

06/06/2026 10:08 pm

Cinque Terre

34.99 K

Cinque Terre

0

ಸಂಬಂಧಿತ ಸುದ್ದಿ