ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ : ಮಳೆಗಾಗಿ ಕಪ್ಪೆಗಳ ಮದುವೆ - ಸೂರಶೆಟ್ಟಿಕೊಪ್ಪ ಗ್ರಾಮದಲ್ಲಿ ಮದುವೆಯ ಸಂಭ್ರಮ

ಕಲಘಟಗಿ : ಜೂನ್ ಮೊದಲನೆ ವಾರದಲ್ಲಿ ಆರಂಭವಾಗಬೇಕಿದ್ದ ಮಳೆ ಇದುವರೆಗೂ ಬಾರದೆ ಇರುವ ಕಾರಣ ರೈತಾಪಿ ವರ್ಗದ ಜನರು ಬೇಸತ್ತು ಹೋಗಿದ್ದಾರೆ.

ಮಳೆ ಬಾರದೆ ಇರುವ ಕಾರಣ ಕಲಘಟಗಿ ತಾಲ್ಲೂಕಿನ ಸೂರಶೆಟ್ಟಿಕೊಪ್ಪ ಗ್ರಾಮಸ್ಥರು ಇಂದು ಮಳೆಗಾಗಿ ಕಪ್ಪೆಗಳ ಮದುವೆ ಮಾಡಿದ್ದಾರೆ.

ಇಂದು ಮುಂಜಾನೆ ಗ್ರಾಮಸ್ಥರೆಲ್ಲರೂ ಸೇರಿ ಸಂಪ್ರದಾಯದಂತೆ ದೇವಸ್ಥಾನದ ಮುಂದೆ ಪೆಂಡಾಲ್ ಹಾಕಿಸಿ ಹಾಲಗಂಬಾ ಹಾಕಿಸಿ ಕಪ್ಪೆಗಳಿಗೆ ಅರಿಶಿನ ಹಚ್ಚಿ ಸೂರಗಿ ನೀರನ್ನು ಹಾಕಿ ಬಾಸಿಂಗ ತೊಡಸಿ ಮದುವೆ ಮಾಡಿದ್ದಾರೆ.

ಅಷ್ಟೇ ಅಲ್ಲದೆ ಗ್ರಾಮದ ತುಂಬ ಕಪ್ಪೆಗಳನ್ನು ಮೆರವಣಿಗೆ ಮಾಡಿದ್ದು. ಗ್ರಾಮಸ್ಥರೆಲ್ಲರಿಗೂ ಅಡಿಗೆ ಮಾಡಿಸಿ ಊಟದ ವ್ಯವಸ್ಥೆ ಕೂಡ ಮಾಡಿದ್ದಾರೆ.

ಮಳೆಗಾಗಿ ಈ ಗ್ರಾಮಸ್ಥರು ದೇವರ ಮೊರೆ ಹೋಗಿದ್ದು ರೈತರು ಸಂಕಷ್ಟದಲ್ಲಿ ಸಿಲುಕಿದ್ದು ರಾಜ್ಯದ ತುಂಬಾ ಮಳೆ ಆಗಬೇಕು ಎಂದು ಗ್ರಾಮಸ್ಥರು ದೇವರಿಗೆ ಬೇಡಿಕೊಂಡಿದ್ದಾರೆ.

ವರದಿ : ಉದಯ ಗೌಡರ ಪಬ್ಲಿಕ್ ನೆಕ್ಸ್ಟ್ ಕಲಘಟಗಿ

Edited By : Manjunath H D
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

19/06/2026 07:39 pm

Cinque Terre

13.8 K

Cinque Terre

0

ಸಂಬಂಧಿತ ಸುದ್ದಿ