ಧಾರವಾಡ: ರಾಯಾಪುರದಲ್ಲಿರುವ ಇಸ್ಕಾನ್ ಶ್ರೀ ಶ್ರೀ ರಾಧಾ ಗೋವಿಂದ ದೇವಜಿ ಮಂದಿರದ ಮೊದಲ ಹಂತದ ಉದ್ಘಾಟನೆ ಪೂರ್ಣಗೊಂಡಿದ್ದು, 2026ರ ಆಗಸ್ಟ್ 10ರಿಂದ ಸಾರ್ವಜನಿಕ ದರ್ಶನಕ್ಕೆ ತೆರೆಯಲಾಗುತ್ತದೆ. ಜೂನ್ 22ರಂದು ಪ್ರಾಣ ಪ್ರತಿಷ್ಠಾ ಮಹೋತ್ಸವ ನಡೆಯಲಿದ್ದು, ಜೂನ್ 18ರಿಂದ ಆಗಸ್ಟ್ 9ರವರೆಗೆ 48 ದಿನಗಳ ಮಂಡಲ ಪೂಜೆ ಹಿನ್ನೆಲೆಯಲ್ಲಿ ಹೊಸ ಮಂದಿರ ಸಾರ್ವಜನಿಕರಿಗೆ ಮುಚ್ಚಿರಲಿದೆ.
ಸುಮಾರು ₹30 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಈ ಭವ್ಯ ಮಂದಿರವು ಉತ್ತರ ಕರ್ನಾಟಕದ ಪ್ರಮುಖ ಆಧ್ಯಾತ್ಮಿಕ, ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಕೇಂದ್ರವಾಗಿ ರೂಪುಗೊಳ್ಳುತ್ತಿದೆ. ಉತ್ತರ ಭಾರತದ ನಾಗರ ಮತ್ತು ದಕ್ಷಿಣ ಭಾರತದ ದ್ರಾವಿಡ ಶೈಲಿಗಳ ಸಮನ್ವಯವಾದ ವೇಶರ ವಾಸ್ತುಶಿಲ್ಪದಲ್ಲಿ ನಿರ್ಮಿತವಾಗಿರುವ ಈ ದೇವಾಲಯವು ಭವಿಷ್ಯದಲ್ಲಿ ಸುಮಾರು 2 ಲಕ್ಷ ಚದರ ಅಡಿ ವಿಸ್ತೀರ್ಣದ ಸಂಕೀರ್ಣವಾಗಿ ಬೆಳೆಯಲಿದೆ.
ಮಂಡಲ ಪೂಜೆ ಪೂರ್ಣಗೊಂಡ ಬಳಿಕ ಆಗಸ್ಟ್ 10ರಿಂದ ಭಕ್ತರಿಗೆ ನಿಯಮಿತ ಪೂಜೆ ಹಾಗೂ ಸಾರ್ವಜನಿಕ ದರ್ಶನ ಆರಂಭವಾಗಲಿದೆ.
Kshetra Samachara
13/06/2026 07:23 pm
LOADING...