ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನೀಟ್ ಪ್ರಶ್ನೆಪತ್ರಿಕೆ ಸೋರಿಕೆ : ಸಚಿವರ ರಾಜಿನಾಮೆಗೆ ನೇಕಾರ ಸಂಘ ಒತ್ತಾಯ

ರಬಕವಿ-ಬನಹಟ್ಟಿ: ನೀಟ್ ಪರೀಕ್ಷಾ ಪ್ರಶ್ನೆಪತ್ರಿಕೆ ಸೋರಿಕೆಯಿಂದ ಕೋಟ್ಯಾಂತರ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದ್ದು, ಕೇಂದ್ರ ಶಿಕ್ಷಣ ಸಚಿವರು ರಾಜಿನಾಮೆ ನೀಡಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ನೇಕಾರ ಸೇವಾ ಸಂಘದ ರಾಜ್ಯಾಧ್ಯಕ್ಷ ಶಿವಲಿಂಗ ಟಿರಕಿ ಒತ್ತಾಯಿಸಿದರು.

ರಬಕವಿ-ಬನಹಟ್ಟಿ ತಹಶಿಲ್ದಾರ ಕಚೇರಿ ಆವರಣದಲ್ಲಿ ಕೆಲಹೊತ್ತು ಪ್ರತಿಭಟಿಸಿದ ನಂತರ ತಹಶಿಲ್ದಾರ ಅವರಿಗೆ ಮನವಿ ಸಲ್ಲಿಸಿ, ಅವರು ಮಾತನಾಡಿ, ದೇಶಾದ್ಯಂತ ವಿದ್ಯಾರ್ಥಿಗಳು ಬೀದಿಗಿಳಿದು ಹೋರಾಟ ಮಾಡುವ ಪರಿಸ್ಥಿತಿ ಬಂದಿದೆ. ಈಗಾಗಲೇ 25ಜನ ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗಿದ್ದು, ಅವರ ಕುಟುಂಬಗಳ ಕನಸುಗಳು ನುಚ್ಚು ನೂರಾಗಿವೆ. ವಿದ್ಯಾರ್ಥಿಗಳ ಆತ್ಮವಿಶ್ವಾಸಕ್ಕೆ ದಕ್ಕೆ ಬರುವಂತಹ ಕಾರ್ಯವು ಶಿಕ್ಷಣ ಇಲಾಖೆಯಿಂದ ಆಗಬಾರದು. ಕಾರಣ ಸೂಕ್ತ ಕ್ರಮಕೈಗೊಳ್ಳುವಂತೆ ಒತ್ತಾಯಿಸುತ್ತಿದ್ದೆವೆ ಎಂದರು.

ಈ ಸಂದರ್ಭದಲ್ಲಿ ನೇಕಾರರಾದ ರಾಜೇಂದ್ರ ಮಿರ್ಜಿ, ಗಂಗಪ್ಪ ಒಂಟಗುಡಿ, ಈರಪ್ಪ ಮಡಿವಾಳರ, ಬಸು ಜಮಖಂಡಿ, ಆರ್.ಎಂ.ಸೋರಗಾಂವಿ, ಎಸ್.ಎಸ್.ಊದಗಟ್ಟಿ ಸೇರಿ ಅನೇಕರಿದ್ದರು.

Edited By : PublicNext Desk
Kshetra Samachara

Kshetra Samachara

07/06/2026 07:24 pm

Cinque Terre

2.24 K

Cinque Terre

0

ಸಂಬಂಧಿತ ಸುದ್ದಿ