ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಾಗಲಕೋಟೆ: 10ನೇ ಪೂರೈಸಿದ ಮುಷ್ಕರ, ಯಲ್ಲಣ್ಣ ವೃತ್ತ ಪುನರ್ ನಿರ್ಮಾಣಕ್ಕೆ ಒತ್ತಾಯ

ರಬಕವಿ-ಬನಹಟ್ಟಿ: ತಾಲೂಕಿನ ಮಹಾಲಿಂಗಪುರ ಪಟ್ಟಣದಲ್ಲಿ ಬೆಳವಡಿ ಯಲ್ಲಣ್ಣ ವೃತ್ತ ಮರುಸ್ಥಾಪನೆಗೆ ಒತ್ತಾಯಿಸಿ, ಪುರಸಭೆ ಆವರಣದಲ್ಲಿ ಕಳೆದ ಹತ್ತು ದಿನಗಳಿಂದ ವಿಕಲಚೇತನ ಹಾಗೂ ಕಾರ್ಮಿಕ ಸಂಘದ ಅಧ್ಯಕ್ಷ ಅರ್ಜುನ ಬಂಡಿವಡ್ಡರ ಮುಷ್ಕರ ಕೈಗೊಂಡಿದ್ದಾರೆ.

ಮುಷ್ಕರಕ್ಕೆ ಸಮಾಜ ಗುರುಗಳು ಸೇರಿದಂತೆ ರೈತ, ಕೆ.ಆರ್.ಎಸ್, ಬೀದಿವ್ಯಾಪಾರಿ ಸೇರಿದಂತೆ ವಿವಿಧ ಸಂಘಟನೆಗಳು ಬೆಂಬಲಿಸಿ, ಭಾಗವಹಿಸಿದ್ದಾರೆ.

ಇದೇ ಬುಧವಾರ ಜೂನ್ 24 ರಂದು ಬೃಹತ್ ರಸ್ತೆ ಚಳುವಳಿ ಹಮ್ಮಿಕೊಳ್ಳಲಾಗಿದೆ ಎಂದು ಅರ್ಜುನ ಬಂಡಿವಡ್ಡರ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ರೈತ ಮುಖಂಡರಾದ ಗಂಗಪ್ಪ ಮೇಟಿ, ಬಂದು ಫಕಾಲಿ, ಶ್ರೀಕಾಂತ ಘೂಳ್ಳನ್ನವರ, ಸಿದ್ದು ಉಳ್ಳಾಗಡ್ಡಿ, ಕರೆಪ್ಪ ಮೇಟಿ, ಗೌಡಪ್ಪ ಚನಾಳ, ಬಸಪ್ಪ ಉಳ್ಳಾಗಡ್ಡಿ, ಚನ್ನಪ್ಪ ಇಟ್ನಾಳ ಸೇರಿದಂತೆ ಅನೇಕರಿದ್ದರು.

Edited By : Manjunath H D
PublicNext

PublicNext

20/06/2026 09:52 pm

Cinque Terre

3.09 K

Cinque Terre

0

ಸಂಬಂಧಿತ ಸುದ್ದಿ