ರಬಕವಿ-ಬನಹಟ್ಟಿ: ವಿದ್ಯುತ್ ಖಾಸಗೀಕರಣ ವಿರೋಧಿಸಿ ಮಹಾಲಿಂಗಪುರ ಪಟ್ಟಣದ ಹೆಸ್ಕಾಂ ಕಚೇರಿ ಆವರಣದಲ್ಲಿ ಹಮ್ಮಿಕೊಂಡ ಮುಷ್ಕರದಲ್ಲಿ ಪ್ರತಿಭಟನಾಕಾರರು ಹಾಗೂ ಬಿಜೆಪಿ ಮುಖಂಡರ ನಡುವೆ ಮಾತಿನ ಜಟಾಪಟಿ ನಡೆಯಿತು. ವಿವರ- "ಟಾಟಾ ಪವರ್ ಕಂಪನಿ ಲಿಮಿಟೆಡ್" ಖಾಸಗಿ ಕಂಪನಿಗೆ ಕರ್ನಾಟಕ ರಾಜ್ಯದಲ್ಲಿ ವಿದ್ಯುತ್ ವಿತರಣಾ ಚಟುವಟಿಕೆಗಾಗಿ ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಆಗಮಿಸಿದ ರೈತ, ನೇಕಾರ ಸೇರಿ ವಿವಿಧ ಸಂಘಟನೆಗಳ ಹೋರಾಟಗಾರರು ಮಹಾಲಿಂಗಪುರ ಪಟ್ಟಣದ ಹೆಸ್ಕಾಂ ಕಚೇರಿಯ ಮುಂದೆ ಕೆಲಹೊತ್ತು ಪ್ರತಿಭಟಿಸಿದರು.
ಇದೇ ಸಂದರ್ಭದಲ್ಲಿ ಶಾಸಕ ಸಿದ್ದು ಸವದಿ ಹಾಗೂ ಬೆಂಬಲಿಗರು ಆಗಮಿಸಿದ ಸಂದರ್ಭದಲ್ಲಿ ಅರ್ಜುನ ಹಲಗಿಗೌಡರ ಮಾತನಾಡುವ ಸಂದರ್ಭದಲ್ಲಿ ಕೇಂದ್ರ ಸರ್ಕಾರಕ್ಕೆ ಇದು ಸಂಬಂಧವಿಲ್ಲ. ನಾವೇಕೆ ಇಲ್ಲಿ ಇರಬೇಕೆಂದು ಶಾಸಕರು ಹೊರಟು ಹೋದರು. ಅದೇ ಸಮಯದಲ್ಲಿ ಕೆಲ ಹೋರಾಟಗಾರರು "ಹೋದವರು ಹೋಗಲಿ" ಎನ್ನುತ್ತಿದ್ದಂತೆ ಮತ್ತೆ ಮರಳಿದ ಬಿಜೆಪಿ ಪರ ಕೆಲ ಮುಖಂಡರು ಹಾಗೂ ಹೋರಾಟಗಾರರ ನಡುವೆ ತೀವ್ರ ವಾಗ್ವಾದಗಳು ನಡೆದು ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಪೊಲೀಸರು ಮಧ್ಯಪ್ರವೇಶಿಸಿ, ವಾತಾವರಣ ತಿಳಿಗೊಳಿಸಿದರು. ತದನಂತರ ರೈತ ಮುಖಂಡ ಗಂಗಪ್ಪ ಮೇಟಿ ಮಾತನಾಡಿ, ಪಕ್ಷಾತೀತವಾಗಿ ನಡೆಯುತ್ತಿರುವ ಹೋರಾಟದಲ್ಲಿ ಎಲ್ಲಾ ಪಕ್ಷಗಳ ರೈತರಿಗೆ ವಿದ್ಯುತ್ ಅವಶ್ಯಕತೆ ಇದೆ. ಹಾಗಾಗಿ ಇಂತಹ ಸಂದರ್ಭದಲ್ಲಿ ಯಾರದೇ ದಬ್ಬಾಳಿಕೆಗೆ ನಾವು ಹೆದರುವುದಿಲ್ಲ ಎಂಬ ವಿಡಿಯೋ ವೈರಲ್ ಆಗಿದೆ.
ಹೋರಾಟದಲ್ಲಿ ನೇಕಾರ ಮುಖಂಡ ಶಿವಲಿಂಗ ಟಿರಕಿ, ರೈತ ಮುಖಂಡ ಶ್ರೀಕಾಂತ ಘೂಳನವರ ಹಾಗೂ ರೈತರು ಸೇರಿದಂತೆ ಅನೇಕರಿದ್ದರು.
PublicNext
17/06/2026 08:11 pm
LOADING...