ಬಾಗಲಕೋಟೆ: ಆರ್‌ಸಿಬಿ ಸಂಭ್ರಮಾಚರಣೆ ವೇಳೆ ಪುಂಡಾಟಿಕೆ ಮೆರೆದಿದ್ದ 11 ಯುವಕರ ವಾಹನಗಳನ್ನು ಜಪ್ತಿ ಮಾಡಲಾಗಿದೆ.
ಮೇ 31 ರಾತ್ರಿ 12 ಗಂಟೆಗೆ ಬಾಗಲಕೋಟೆಯ ವಿದ್ಯಾಗಿರಿಯಲ್ಲಿ ನಡೆದ ಸಂಭ್ರಮಾಚರಣೆಗೆ ವೇಳೆ ಕೆಲವು ಪುಂಡರು, ತಮ್ಮ ಬೈಕ್‌ಗಳನ್ನು ಅಡ್ಡಾದಿಡ್ಡಿಯಾಗಿ ಓಡಿಸಿದಲ್ಲದೇ ಕರ್ಕಶ ಧ್ವನಿಯಿಂದ ಕಿರಿಕಿರಿ ಉಂಟು ಮಾಡಿದ್ದರು. ಪೊಲೀಸರು ಎಷ್ಟೇ ತಿಳಿ ಹೇಳಿದರೂ ಲೆಕ್ಕಿಸದೆ ಸಂಚಾರ ನಿಯಮಗಳನ್ನು ಉಲ್ಲಂಘಿಸಿದ್ದರು.
ಎಲ್ಲ ವಾಹನಗಳ ಫೋಟೋ ಸೆರೆಹಿಡಿದಿದ್ದ ಪೊಲೀಸರು, 11 ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. 8 ಬೈಕ್, 1 ಟ್ರಾö್ಯಕ್ಟರ್ ಹಾಗೂ 1 ಫಾರ್ಚೂನರ್, 1 ಮೂರು ಚಕ್ರದ ವಾಹನವಿದೆ. ಇನ್ನು ಪೊಲೀಸರ ಸಮ್ಮುಖದಲ್ಲೇ ವ್ಯಕ್ತಿಯೋರ್ವನನ್ನು ಹಿಗ್ಗಾಮುಗ್ಗಾ ಥಳಿಸಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರ ಮೇಲೆ ದೂರು ದಾಖಲಾಗಿದ್ದು, ಪೊಲೀಸರು ಘಟನೆ ಸಂಬಂಧ ಸುಮೊಟೋ ಪ್ರಕರಣ ದಾಖಲಿಸಿಕೊಂಡಿದ್ದಾರೆ.
PublicNext
06/06/2026 10:38 pm
LOADING...