ರಬಕವಿ-ಬನಹಟ್ಟಿ: ತಾಲೂಕಿನ ಮಹಾಲಿಂಗಪುರ ಪಟ್ಟಣದಲ್ಲಿ ನೇಕಾರ ಸಮಾಜ ಮತ್ತು ನೇಕಾರಿಕೆ ಸಮುದಾಯದವರು ಸೇರಿಕೊಂಡು ಮಾಜಿ ಸಚಿವೆ ಉಮಾಶ್ರೀ ಅವರಿಗೆ ಕ್ಯಾಬಿನೆಟ್ ದರ್ಜೆಯ ಸಚಿವ ಸ್ಥಾನ ಕೊಡಬೇಕೆಂದು ಒತ್ತಾಯಿಸಿ, ಕೆಲ ಸಮಯ ಪ್ರತಿಭಟಿಸಲಾಯಿತು.
ಉಮಾಶ್ರೀ ಅವರು ಸಚಿವರಾಗಿದ್ದ ಸಂದರ್ಭದಲ್ಲಿ ಅವರ ಕ್ರಿಯಾಶೀಲತೆ ಮೂಲಕ ರಾಷ್ಟ್ರಮಟ್ಟದ ಪ್ರಶಸ್ತಿ ಪಡೆದುಕೊಂಡವರಾಗಿದ್ದು, ನೇಕಾರ ಸಮುದಾಯದವರ ಒತ್ತಾಯದ ಮೇರೆಗೆ ಅವರಿಗೆ ಸಚಿವ ಸ್ಥಾನಕ್ಕೆ ಹಿರಿಯರು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಮಾಜದ ಹಿರಿಯರಾದ ಮಹಾದೇವಪ್ಪ ಬರಗಿ ಡಾ ಬಿ ಡಿ ಸೊರಗಾವಿ, ಶಂಕರ ಸೊನ್ನದ, ಲಕ್ಕಪ್ಪ ಚಮಕೇರಿ, ರಾಜು ಬಾವಿಕಟ್ಟಿ, ಬಸವರಾಜ ಚಮಕೇರಿ, ಮಹಾಲಿಂಗ ಹಾವನಳ್ಳಿ, ನೇಕಾರ ಮುಖಂಡ ಶಿವಲಿಂಗ ತಿರಕಿ ಸೇರಿದಂತೆ ಅನೇಕರಿದ್ದರು.
PublicNext
13/06/2026 05:22 pm
LOADING...