ಬಾಗಲಕೋಟೆ: ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದ ಕಚೇರಿಯಲ್ಲಿ ಇಂದು ಉದ್ವಿಗ್ನ ಘಟನೆ ನಡೆದಿದೆ. ಪರಿಹಾರ ವಿತರಣೆಯಲ್ಲಿ ತಾರತಮ್ಯ ಮಾಡಲಾಗಿದೆ ಎಂದು ಆರೋಪಿಸಿ ರೊಚ್ಚಿಗೆದ್ದ ಮುಳುಗಡೆ ಸಂತ್ರಸ್ತನೊಬ್ಬ ಪ್ರಾಧಿಕಾರದ ಸಿಬ್ಬಂದಿಯ ಮೇಲೆ ಚಪ್ಪಲಿಯಿಂದ ಹಲ್ಲೆ ನಡೆಸಿದ್ದಾನೆ.
ಪರಿಹಾರದ ವಿಚಾರವಾಗಿ ಕಚೇರಿಗೆ ಬಂದಿದ್ದ ಸಂತ್ರಸ್ತನು ಅಧಿಕಾರಿಗಳೊಂದಿಗೆ ತೀವ್ರ ವಾಗ್ವಾದ ನಡೆಸಿದ್ದಾನೆ. ಮಾತುಕತೆ ವಾಗ್ವಾದವಾಗಿ ಮಾರ್ಪಟ್ಟು, ಅದು ತೀವ್ರಗೊಂಡ ಬಳಿಕ ಸಂತ್ರಸ್ತನು ಸಿಬ್ಬಂದಿಯ ಮೇಲೆ ಚಪ್ಪಲಿಯಿಂದ ಹಲ್ಲೆ ನಡೆಸಿದ್ದಾನೆ ಎಂದು ತಿಳಿದುಬಂದಿದೆ.
ಈ ಘಟನೆಯಿಂದ ಕಚೇರಿಯಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮಾಹಿತಿ ಸಂಗ್ರಹಿಸಿದ್ದು, ಪ್ರಕರಣದ ಕುರಿತು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
ವರದಿ: ವಿನೋದ ಸೂರಗೊಂಡ, ಬಾಗಲಕೋಟೆ
PublicNext
13/06/2026 05:35 pm
LOADING...