ಜಮಖಂಡಿ: ಜಮಖಂಡಿ ತಾಲೂಕಿನ ಸಾವಳಗಿ ಗ್ರಾಮದ ಇಂದ್ರಾನಗರ ಕಾಲೋನಿಯಲ್ಲಿ ದೊಡ್ಡ ದೊಡ್ಡ ಲಘು ವಾಹನ ಚಾಲಕರ ನಿರ್ಲಕ್ಷ್ಯ ಮತ್ತು ಅಜಾಗರೂಕ ಚಾಲನೆಯಿಂದ ಸಾರ್ವಜನಿಕರು ಸಂಕಷ್ಟಕ್ಕೆ ಸಿಲುಕುವಂತಾಗಿದೆ. ರಸ್ತೆ ನಿಯಮಗಳನ್ನು ಪಾಲಿಸದೆ ಅತಿವೇಗದಲ್ಲಿ ವಾಹನ ಚಲಾಯಿಸುವುದು, ಸಾರ್ವಜನಿಕ ಸ್ಥಳಗಳಲ್ಲಿ ಅಡ್ಡಾದಿಡ್ಡಿಯಾಗಿ ವಾಹನ ನಿಲ್ಲಿಸುವುದು ಹಾಗೂ ಅಪಾಯಕಾರಿ ರೀತಿಯಲ್ಲಿ ಸಂಚರಿಸುವುದರಿಂದ ಜನರಲ್ಲಿ ಆತಂಕ ಮನೆ ಮಾಡಿದೆ.
ವಿಶೇಷವಾಗಿ ಶಾಲಾ ಮಕ್ಕಳು, ವೃದ್ಧರು ಹಾಗೂ ಮಹಿಳೆಯರು ರಸ್ತೆ ದಾಟುವ ಸಂದರ್ಭದಲ್ಲಿ ಜೀವದ ಭಯದಲ್ಲೇ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಮನೆಗಳು ಹಾನಿಯಾಗುತ್ತಿದ್ದು ಮತ್ತು ಸಾರ್ವಜನಿಕ ಆಸ್ತಿ ಹಾನಿ ಆಗುತ್ತಿದ್ದು ಹಲವು ಬಾರಿ ಸ್ಥಳೀಯರು ಮತ್ತು ಸಾರ್ವಜನಿಕರು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ಸಮಸ್ಯೆ ಮುಂದುವರಿದಿದೆ ಎಂಬ ಆರೋಪ ಕೇಳಿಬರುತ್ತಿದೆ.
ರಸ್ತೆ ಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿ, ನಿಯಮ ಉಲ್ಲಂಘಿಸುವ ವಾಹನ ಚಾಲಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಮತ್ತು ಈ ಲಘು ವಾಹನಗಳನ್ನು ಈ ರಸ್ತೆಯಲ್ಲಿ ಬಿಡಬಾರದು ಯಾವುದೇ ಜೀವ ಹಾನಿ ಆಗುವ ಮುಂಚೆ ಅಧಿಕಾರಿಗಳು ಇತ್ತ ಕಡೆ ಗಮನ ಹರಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಈ ವಾಹನಗಳನ್ನು ಈ ಚಿಕ್ಕ ರಸ್ತೆಗೆ ಹೋಗಲು ಪರವಾನಿಗೆ ಇಲ್ಲ ಆದರೂ ಈ ವಾಹನಗಳು ಸಾಕಷ್ಟು ಬರುತ್ತವೆ ಈ ವಾಹನ ಸಂಚಾರದಿಂದ ನೆಮ್ಮದಿ ಜೀವನ ನಡೆಸಲು ಆಗುತ್ತಿಲ್ಲಈ ಲಘು ವಾಹನಗಳನ್ನು ಈ ರಸ್ತೆಗೆ ಬರುವುದನ್ನು ಬಂಧ ಮಾಡದಿದ್ದರೆ ರಸ್ತೆ ಬಂದ ಮಾಡಿ ಪ್ರತಿಭಟನೆ ಮಾಡಬೇಕಾಗುತ್ತೆ ಎಂದು ಸಾರ್ವಜನಿಕರು ಎಚ್ಚರಿಕೆ ನೀಡಿದ್ದಾರೆ.
ಇದೇ ಸಂದರ್ಭದಲ್ಲಿ ಆದಿತ್ಯ ತಿಕೋಟಾ, ಶ್ರೀಶೈಲ್ ತಳವಾರ್, ಗಣಪತಿ ತಳವಾರ್, ದೀಪಕ ಗಾಯಕವಾಡ,ಮಂಜುನಾಥ ಮಾಂಗ, ಸ್ವರಾಜ್ ಮಾದರ, ರಾಕೇಶ ತಿಕೋಟಾ ಮತ್ತು ಮಹಿಳೆಯರು ಇನ್ನೂ ಅನೇಕ ಯುವಕರು ಸಾರ್ವಜನಿಕರು ಇದ್ದರು.
ವರದಿ : ವಿನೋದ ಸೂರಗೊಂಡ ಪಬ್ಲಿಕ್ ನೆಕ್ಸ್ಟ್ ಜಮಖಂಡಿ
PublicNext
14/06/2026 09:10 am