ಬಾಗಲಕೋಟೆ: ಬೀದಿನಾಯಿಗಳ ದಾಳಿಯಿಂದ ಜನರು ಪದೇ ಪದೇ ಸಮಸ್ಯೆ ಎದುರಿಸುತ್ತಿರೋದ್ರಿಂದ ಬಾಗಲಕೋಟೆ ನಗರದಲ್ಲಿ ನಾಯಿಗಳ ಕಾರ್ಯಾಚರಣೆ ನಡೆಸಲಾಗಿದೆ.
ನಗರಸಭೆ ಅಧಿಕಾರಿಗಳ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದ್ದು, ಅಸ್ಸಾಂ ನಿಂದ ಬಂದ ಎಬಿಸಿ ಡಾಗ್ ಕ್ಯಾಚಿಂಗ್ ತಂಡ ಬೀದಿ ನಾಯಿಗಳನ್ನ ಸೆರೆ ಹಿಡಿದು ಅವುಗಳಿಗೆ ಸಂತಾನಹರಣ ಮತ್ತು ರೇಬಿಸ್ ಚುಚ್ಚು ಮದ್ದು ನೀಡುತ್ತಿದೆ. ಒಟ್ಟು 10 ತಂಡಗಳಾಗಿ ನವನಗರ, ವಿದ್ಯಾಗಿರಿ,ಹಳೆ ಬಾಗಲಕೋಟೆ ಭಾಗದಲ್ಲಿ ಏಕಕಾಲಕ್ಕೆ ಡಾಗ್ ಕ್ಯಾಚಿಂಗ್ ಆಪರೇಷನ್ ಶುರುಮಾಡಿದೆ. ಇದ್ರಿಂದ ನಗರದ ಜನತೆ ನಿಟ್ಟುಸಿರು ಬಿಡುವಂತಾಗಿದೆ.
PublicNext
09/06/2026 08:40 am
LOADING...