ಬಾಗಲಕೋಟೆ : ಚಿನ್ನಾಭರಣ-ಮೊಬೈಲ್ ಕಳ್ಳತನ ಪ್ರಕರಣಗಳನ್ನ ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರ ಪೊಲೀಸರು ಭೇದಿಸಿದ್ದಾರೆ. ಓರ್ವ ಪುರುಷ, ಮಹಿಳೆ ಸೇರಿ ಇಬ್ಬರು ಆರೋಪಿಗಳನ್ನ ಬಂಧಿಸಿದ್ದಾರೆ.
ಬಂಧಿತ ಆರೋಪಿಗಳಿಂದ 62 ಗ್ರಾಂ ಚಿನ್ನಾಭರಣ, 30 ಮೊಬೈಲ್ ಸೇರಿದಂತೆ ಒಟ್ಟು 13.34 ಲಕ್ಷ ಮೌಲ್ಯದ ವಸ್ತುಗಳ ಜಪ್ತಿ ಮಾಡಿದ್ದಾರೆ. ಬಂಧಿತ ಕಳ್ಳರು ಮಹಾರಾಷ್ಟ್ರ ಮೂಲದ ಗೋರಕನಾಥ ಜಾಧವ ಎಂದು ತಿಳಿದುಬಂದಿದೆ.
ಮನೆ ಕಳ್ಳತನ ಹಾಗೂ ಮಾಂಗಲ್ಯ ಸರ ದೋಚಿದ ಪ್ರಕರಣದಲ್ಲಿ ಈ ಕಳ್ಳ ಭಾಗಿಯಾಗಿದ್ದ. ಪಿಎಸ್‌ಐ ಶಾಂತಾ ಹಳ್ಳಿ ನೇತೃತ್ವದ ತಂಡದಿಂದ ಕಾರ್ಯಾಚರಣೆ ನಡೆಸಲಾಗಿದ್ದು, ಕಳೆದುಹೋದ ಚಿನ್ನಾಭರಣ, ಮೊಬೈಲ್‌ಗಳನ್ನು ಸಾರ್ವಜನಿಕರಿಗೆ ಹಸ್ತಾಂತರ ಮಾಡಿದ್ರು.
PublicNext
04/06/2026 02:39 pm
LOADING...