ಮೈಸೂರು : ಮೈಸೂರು ನಗರ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ .
ಪೊಲೀಸರ ಕಾರ್ಯ ವೈಖರಿಗೆ ಜನ ಫಿದಾ ಆಗಿದ್ದಾರೆ. 41 ಸ್ವತ್ತು ಕಳ್ಳತನ ಪ್ರಕರಣ ಹಾಗೂ 3 ವಂಚನೆ ಪ್ರಕರಣ ಪತ್ತೆ ಹಚ್ಚಿದ್ದಾರೆ. 2.09 ಕೋಟಿ ಮೌಲ್ಯದ 1 ಕೆಜಿ 578 ಗ್ರಾಂ ಚಿನ್ನ, 3 ಕೆಜಿ ಬೆಳ್ಳಿ ಪದಾರ್ಥ, 10 ವಾಹನಗಳು ಸೇರಿ 2,76,786 ನಗದು ಮತ್ತು ಇನ್ನಿತರ ಸ್ವತ್ತುಗಳು ವಶಕ್ಕೆ ಪಡೆದಿದ್ದಾರೆ. ಸ್ವತ್ತು ಕಳೆದುಕೊಂಡಿದ್ದವರಿಗೆ ಹಿಂದಿರುಗಿಸಿದ್ದಾರೆ.
ಪ್ರಕರಣದ ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟಿದ್ದು ಪೊಲೀಸ್ ಕಮಿಷನರ್ ಸೀಮಾ ಲಾಟ್ಕರ್ ನೇತೃತ್ವದ ಕಾರ್ಯಾಚರಣೆಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
PublicNext
09/06/2026 08:36 am
LOADING...