ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೈಸೂರು: ಬಿರಿಯಾನಿ ಜತೆ ಮೈಯೊನೆಸ್ ಸಾಸ್ ಕೊಟ್ಟಿಲ್ಲವೆಂದು ಗಲಾಟೆ - ಗ್ರಾಹಕನ ರಂಪಾಟ, ಕೇಸ್!

ಮೈಸೂರು: ನಾನ್ ವೆಜ್‌ಗೆ ಮೈಯೊನೆಸ್ ಸಾಸ್ ಕೊಟ್ಟಿಲ್ಲವೆಂದು ಗ್ರಾಹಕನೋರ್ವ ಹೋಟೆಲ್‌ನಲ್ಲಿ ರಂಪಾಟ ಮಾಡಿದ್ದು, ಈ ಘಟನೆ ವಿಜಯನಗರ ಪೊಲೀಸ್ ಠಾಣೆ ಮೆಟ್ಟಿಲೇರಿದೆ.

ವಿಜಯನಗರದಲ್ಲಿರುವ ಚಾಮುಂಡೇಶ್ವರಿ ದೊನ್ನೆ ಬಿರಿಯಾನಿ ಹೋಟೆಲ್‌ನಲ್ಲಿ ಈ ಘಟನೆ ನಡೆದಿದೆ. ಗ್ರಾಹಕರೊಬ್ಬರು ಚಿಕನ್ ತಂದೂರಿ ಆರ್ಡರ್ ಮಾಡಿದ್ದರು. ಪಾರ್ಸೆಲ್‌ನಲ್ಲಿ ಮೈಯೊನೆಸ್ ಸಾಸ್ ಇಲ್ಲದಿರುವುದನ್ನು ಗಮನಿಸಿದ ಗ್ರಾಹಕ ತಕ್ಷಣವೇ ಸಿಬ್ಬಂದಿಯೊಂದಿಗೆ ವಾಗ್ವಾದಕ್ಕಿಳಿದಿದ್ದಾರೆ.

ಸಣ್ಣ ವಿಷಯಕ್ಕೆ ಆರಂಭವಾದ ಈ ವಾಗ್ವಾದ ತಾರಕಕ್ಕೇರಿದ್ದು, ಗ್ರಾಹಕ ಹೋಟೆಲ್ ಸಿಬ್ಬಂದಿಯೊಂದಿಗೆ ನಿಂದನೀಯವಾಗಿ ಮಾತನಾಡಿದ್ದಾರೆ ಎನ್ನಲಾಗಿದೆ. ಇತರೆ ಗ್ರಾಹಕರು ಊಟ ಮಾಡುತ್ತಿದ್ದಾಗಲೇ ಈ ಘಟನೆ ನಡೆದಿದ್ದು, ಹೋಟೆಲ್‌ನಲ್ಲಿ ಕೆಲಕಾಲ ಗದ್ದಲದ ವಾತಾವರಣ ನಿರ್ಮಾಣವಾಗಿತ್ತು. ಮೈಯೊನೆಸ್ ಸಾಸ್ ಇಲ್ಲವೆಂಬ ಸಣ್ಣ ಕಾರಣಕ್ಕೆ ಆರಂಭವಾದ ವಾಗ್ವಾದವು ಅಂತಿಮವಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದೆ.

ಸಂಪೂರ್ಣ ಘಟನೆ ಹೋಟೆಲ್‌ನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಘಟನೆ ಬಳಿಕ ಹೋಟೆಲ್ ಮಾಲೀಕರು ವಿಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

Edited By : Abhishek Kamoji
PublicNext

PublicNext

14/06/2026 12:13 pm

Cinque Terre

16.62 K

Cinque Terre

0