ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉತ್ತರ ಕನ್ನಡ: ಸಾರಿಗೆ ಬಸ್ ವಿಸ್ತರಣೆಗೆ ಆಗ್ರಹ!

ಉತ್ತರ ಕನ್ನಡ: ಉತ್ತರ ಕನ್ನಡ ಜಿಲ್ಲೆಯ ಕಾರವಾರದಿಂದ ಹಳಗಾ ಗ್ರಾಮಕ್ಕೆ ಬಿಡುವ ಕಾರವಾರ_ಹಳಗಾ ಸಾರಿಗೆ ಬಸ್ ಉಳಗಾ ಊರಿನ ವರೆಗೂ ವಿಸ್ತರಿಸಬೇಕೆಂದು ಹಳಗಾ ಊರಿನ ಜನರು ಆಗ್ರಹಿಸಿದ್ದಾರೆ.

ಇದರ‌ ಜತೆಗೆ ಗ್ರಾಮೀಣ ಭಾಗದ ಸಾರಿಗೆ ಬಸ್ ಗಳು ಮಳೆಗಾಲದಲ್ಲಿ ಸೋರುತ್ತಿದ್ದು ಪ್ರಯಾಣಿಕರು ವ್ಯಥೆ ಪಡುವಂತಾಗಿದೆ ಈ ಎಲ್ಲ ಸಮಸ್ಯೆ ಸರಿ ಪಡಿಸಬೇಕೆಂದು ಆಗ್ರಹಿಸಿದ್ದಾರೆ...ಹಳಗಾ ಎನ್ನುವ ಊರಿಗೆ ಎರಡು ಬಸ್ ಸಂಚಾರ ಇದ್ದು ಇದು ಅಲ್ಲಿಂದ ಎರಡೆ ಕಿ.ಮೀ. ದೂರ ಇರುವ ಉಳಗಾ ಊರಿನ ವರೆಗೂ ವಿಸ್ತರಿಸಿದರೆ ಇಲ್ಲಿನ ಸಾಮಾನ್ಯ ಜನರು ಮತ್ತು ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದು ಊರಿನ ಜನ ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಟ್ಟರು.

Edited By : Somashekar
PublicNext

PublicNext

09/06/2026 01:00 pm

Cinque Terre

6.95 K

Cinque Terre

0

ಸಂಬಂಧಿತ ಸುದ್ದಿ