ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ: ಅಪಘಾತದಲ್ಲಿ ಯೋಧ ಸಾವು - ಸ್ವ ಗ್ರಾಮದಲ್ಲಿ ಅಂತಿಮ ನಮನ

ಬೆಳಗಾವಿ: ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ನೇಗಿನಹಾಳ ಗ್ರಾಮದ ಸಿ.ಆರ್.ಪಿ.ಎಫ್ ಯೋಧ ಸಚಿನ್ ಕರಡಿ ಬೆಂಗಳೂರಿನ ರೈಲ್ವೆ ನಿಲ್ದಾಣದಿಂದ ಕೆಳೆಗೆ ಇಳಿಯುವ ಸಂದರ್ಭದಲ್ಲಿ ಅಪಘಾತಕ್ಕಿಡಾಗಿ ಮರಣ ಹೊಂದಿದ್ದು ಸ್ವಗ್ರಾಮದಲ್ಲಿ ಗ್ರಾಮದ ಪ್ರಮುಖ ಬೀದಿಗಳ ಮೂಲಕ ಮೆರವಣಿಗೆ ಮಾಡಿ ಅಂತಿಮ ನಮನ ಸಲ್ಲಿಸಲಾಯಿತು.

ಕೇವಲ 31 ವರ್ಷದ ಯೋಧ ಸಚಿನ್ ಕರಡಿ ಕೆಲವು ತಿಂಗಳ ಹಿಂದೆಯಷ್ಟೇ ವಿವಾಹವಾಗಿತ್ತು. ಚಿಕ್ಕ ವಯಸ್ಸಿನಲ್ಲಿಯೇ ಪತಿಯನ್ನು ಕಳೆದುಕೊಂಡ ಪತ್ನಿಯ ಆಕ್ರಂದನ ಮುಗಿಲು ಮುಟ್ಟಿತ್ತು,

ಈ ಮೆರವಣಿಗೆಯಲ್ಲಿ ಗ್ರಾಮದ ಸಾವಿರಾರು ಯುವಕರು, ಹಿರಿಯರು, ಮಾಜಿ ಸೈನಿಕರು, ಮಹಿಳೆಯರು, ಪೊಲೀಸ್ ಅಧಿಕಾರಿಗಳು ಶಾಲೆಯ ಮಕ್ಕಳು, ಶಿಕ್ಷಕರು ಭಾಗವಹಿಸಿದ್ದರು. ತಹಶೀಲ್ದಾರ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಬಸಲಿಂಗಪ್ಪ ಬಳಿಗಾರ, ಗ್ರಾಮ ಆಡಳಿತಾಧಿಕಾರಿ ಬಸವರಾಜ ಪೂಜೇರ, ಅಂತಿಮ ನಮನ ಸಲ್ಲಿಸಿದರು.

Edited By : Somashekar
PublicNext

PublicNext

10/06/2026 12:19 pm

Cinque Terre

6.39 K

Cinque Terre

0

ಸಂಬಂಧಿತ ಸುದ್ದಿ