ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೈಕ್‌ ತಡೆಯಲು ಹೋಗಿ ಸವಾರನನ್ನು ರಸ್ತೆಗೆ ಕೆಡವಿದ ಕಾನ್‌ಸ್ಟೆಬಲ್‌ಗೆ ಅಮಾನತು ಶಿಕ್ಷೆ

ಮುಂಬೈ: ಮಹಾರಾಷ್ಟ್ರದ ಲಾತೂರ್‌ನಲ್ಲಿ ಏಕಾಏಕಿ ಬೈಕ್‌ ತಡೆಯಲು ಹೋಗಿ ಸವಾರನನ್ನು ರಸ್ತೆಗೆ ಕೆಡವಿದ ಸಂಚಾರಿ ಪೊಲೀಸ್ ಕಾನ್‌ಸ್ಟೆಬಲ್‌ನನ್ನು ಅಮಾನತುಗೊಳಿಸಲಾಗಿದೆ. ಸವಾರನೊಬ್ಬನನ್ನು ಅನುಚಿತವಾಗಿ ತಡೆಯುವ ಯತ್ನದಲ್ಲಿ ಆತ ರಸ್ತೆಗೆ ಬಿದ್ದ ಘಟನೆಯ ತನಿಖೆ ಬಳಿಕ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ಮಂಗಳವಾರ (ಜೂನ್ 9) ತಿಳಿಸಿದ್ದಾರೆ.

ಜೂನ್ 7 ರಂದು ಲಾತೂರ್ ನಗರದ ಮಿನಿ ಮಾರ್ಕೆಟ್ ಬಳಿ ಈ ಘಟನೆ ನಡೆದಿದ್ದು, ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗಿದೆ. ವೈರಲ್ ವಿಡಿಯೋದಲ್ಲಿ ಸಂಚಾರಿ ಶಾಖೆಯ ಕಾನ್‌ಸ್ಟೆಬಲ್ ಶರದ್ ಕಾಂಡೆ ಅವರು ಬೈಕ್‌ ಅನ್ನು ಅನುಚಿತ ರೀತಿಯಲ್ಲಿ ತಡೆಯಲು ಪ್ರಯತ್ನಿಸುತ್ತಿರುವುದು ಸ್ಪಷ್ಟವಾಗಿ ಕಾಣಿಸುತ್ತದೆ. ಇದರ ಪರಿಣಾಮವಾಗಿ ಸವಾರ ರಸ್ತೆಗೆ ಬಿದ್ದಿದ್ದಾನೆ.

ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಅಮೋಲ್ ತಾಂಬೆ, ತಕ್ಷಣವೇ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಉಪ-ವಿಭಾಗೀಯ ಪೊಲೀಸ್ ಅಧಿಕಾರಿ ಸಮೀರ್‌ಸಿಂಗ್ ಸಾಳ್ವೆ ಅವರಿಗೆ ನಿರ್ದೇಶನ ನೀಡಿದ್ದರು. ತನಿಖಾ ವರದಿ ಆಧರಿಸಿ ಅಮಾನತು ಕ್ರಮ ಕೈಗೊಳ್ಳಲಾಗಿದೆ.

Edited By : Vijay Kumar
PublicNext

PublicNext

10/06/2026 06:57 pm

Cinque Terre

7.53 K

Cinque Terre

0

ಸಂಬಂಧಿತ ಸುದ್ದಿ