ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪದೇ ಪದೇ ಅನಾರೋಗ್ಯ ರಜೆ ನಿರಾಕರಣೆ: ಕಚೇರಿ ಶೌಚಾಲಯದಲ್ಲೇ 29 ವರ್ಷದ ಯುವತಿ ಸಾವು!

ಕೇಪ್‌ಟೌನ್‌: ದಕ್ಷಿಣ ಆಫ್ರಿಕಾದಲ್ಲಿ ಮೇಲಧಿಕಾರಿಗಳು ಪದೇ ಪದೇ ಅನಾರೋಗ್ಯ ರಜೆ ನಿರಾಕರಿಸಿದ ಕಾರಣ, 29 ವರ್ಷದ ಮಹಿಳೆಯೊಬ್ಬರು ಕಚೇರಿಯ ಶೌಚಾಲಯದಲ್ಲೇ ಸಾವನ್ನಪ್ಪಿದ ದುರಂತ ಘಟನೆ ವರದಿಯಾಗಿದೆ.

ಈ ಹೃದಯವಿದ್ರಾವಕ ಘಟನೆ ದಕ್ಷಿಣ ಆಫ್ರಿಕಾದಲ್ಲಿ ನಡೆದಿದ್ದು, ಉದ್ಯೋಗಿಗಳಿಗೆ ಮಾನವೀಯತೆಯ ಆಧಾರದ ಮೇಲೆ ರಜೆ ನೀಡಬೇಕಾದ ಅಗತ್ಯವನ್ನು ಮತ್ತೊಮ್ಮೆ ಎತ್ತಿ ತೋರಿಸಿದೆ.

ಅನಾರೋಗ್ಯದಿಂದ ಬಳಲುತ್ತಿದ್ದ ಜಿಸಿನಾ ಧ್ಲಾಧ್ಲಾ ಎಂಬ 29 ವರ್ಷದ ಮಹಿಳೆ, ಅನಾರೋಗ್ಯದ ಕಾರಣದಿಂದ ಕಚೇರಿಯ ಶೌಚಾಲಯದಲ್ಲಿ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಅವರು ತಮ್ಮ ಮೇಲ್ವಿಚಾರಕರಿಗೆ ತಾನು ಅನಾರೋಗ್ಯದಿಂದ ಬಳಲುತ್ತಿದ್ದೇನೆ ಎಂದು ಹಲವಾರು ಬಾರಿ ತಿಳಿಸಿದ್ದರು ಎನ್ನಲಾಗಿದೆ. ಘಟನೆ ನಡೆದ ಹಿಂದಿನ ವಾರಗಳಲ್ಲಿ ಜಿಸಿನಾ ಎರಡು ವೈದ್ಯಕೀಯ ಪ್ರಮಾಣಪತ್ರಗಳನ್ನು ಸಹ ಸಲ್ಲಿಸಿದ್ದರು. ಆದರೆ, ಅವರ ಅನಾರೋಗ್ಯ ರಜೆಗಾಗಿ ಸಲ್ಲಿಸಿದ್ದ ಮನವಿಗಳನ್ನು ಮೇಲಧಿಕಾರಿಗಳು ನಿರಾಕರಿಸಿದ್ದರು ಎಂದು ಅವರ ಕುಟುಂಬ ಸದಸ್ಯರು ದೂರಿದ್ದಾರೆ.

Edited By : Vijay Kumar
PublicNext

PublicNext

11/06/2026 01:48 pm

Cinque Terre

2.25 K

Cinque Terre

0

ಸಂಬಂಧಿತ ಸುದ್ದಿ