ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪ್ರವೀಣ್ ನೆಟ್ಟಾರ್ ಹತ್ಯೆ ಕೇಸ್‌ : ಪ್ರಮುಖ ಆರೋಪಿ ಝಾಕೀರ್‌ಗೆ ಮಧ್ಯಂತರ ಜಾಮೀನು ಮಂಜೂರು

ಮಂಗಳೂರು : ಬಿಜೆಪಿ ಯುವ ಮೋರ್ಚಾ ನಾಯಕ ಪ್ರವೀಣ್ ನೆಟ್ಟಾರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಪ್ರಮುಖ ಆರೋಪಿಯಾಗಿರುವ ಝಾಕೀರ್ ಸವಣೂರು (35) ಎಂಬಾತನಿಗೆ ಕರ್ನಾಟಕ ಹೈಕೋರ್ಟ್ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ಪ್ರಕರಣದ 18ನೇ ಆರೋಪಿಯಾಗಿರುವ ಝಾಕೀರ್, ಪ್ರವೀಣ್ ನೆಟ್ಟಾರ್ ಹತ್ಯೆ ಸಂಚಿನಲ್ಲಿ ನೇರವಾಗಿ ಭಾಗಿಯಾದವರಲ್ಲಿ ಒಬ್ಬನಾಗಿದ್ದ.

ಪ್ರಕರಣದ ತನಿಖೆ ಆರಂಭವಾದ ಕೂಡಲೇ ಬಂಧಿಸಲ್ಪಟ್ಟ ಇಬ್ಬರು ಪ್ರಮುಖ ಶಂಕಿತರಲ್ಲಿ ಝಾಕೀರ್ ಸವಣೂರು ಕೂಡ ಒಬ್ಬನಾಗಿದ್ದ. ಈತನನ್ನು 2022ರ ಜುಲೈ 28ರಂದು ಬೆಳ್ಳಾರೆಯ ಶಫೀಕ್‌ನೊಂದಿಗೆ ಪೊಲೀಸರು ವಶಕ್ಕೆ ಪಡೆದಿದ್ದರು. ಹತ್ಯೆಯ ಸಂಚಿನಲ್ಲಿ ಈತನ ಪಾತ್ರ ಮಹತ್ವದ್ದಾಗಿತ್ತು ಎಂದು ತನಿಖಾಧಿಕಾರಿಗಳು ತಿಳಿಸಿದ್ದರು.

ಈ ಪ್ರಕರಣದಲ್ಲಿ ಈ ಹಿಂದೆ, 26ನೇ ಆರೋಪಿಯಾಗಿರುವ ಸೋಮವಾರಪೇಟೆಯ ಎಚ್.ವೈ. ರಿಯಾಜ್ ಎಂಬಾತನಿಗೆ ಜಾಮೀನು ಲಭಿಸಿತ್ತು. ಆರೋಪಿಗಳಿಗೆ ಆಶ್ರಯ ಕಲ್ಪಿಸಿದ್ದ ಆರೋಪದ ಮೇಲೆ ರಿಯಾಜ್‌ನನ್ನು ಬಂಧಿಸಲಾಗಿತ್ತು.

ಏನಿದು ಪ್ರವೀಣ್ ನೆಟ್ಟಾರ್ ಹತ್ಯೆ ಪ್ರಕರಣ?

2022ರ ಜುಲೈ 26ರಂದು ಬೆಳ್ಳಾರೆಯ ಅಕ್ಷಯ್ ಚಿಕನ್ ಸೆಂಟರ್ ಎದುರು ಬಿಜೆಪಿ ಯುವ ಮೋರ್ಚಾ ನಾಯಕ ಪ್ರವೀಣ್ ನೆಟ್ಟಾರ್ ಅವರನ್ನು ದುಷ್ಕರ್ಮಿಗಳು ಮಾರಕಾಯುಧಗಳಿಂದ ಕೊಚ್ಚಿ ಕೊಲೆ ಮಾಡಿದ್ದರು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಎನ್‌ಐಎ (NIA) ತನಿಖೆಗೆ ವಹಿಸಲಾಗಿತ್ತು. ಎನ್‌ಐಎ ಅಧಿಕಾರಿಗಳು ಇಲ್ಲಿಯವರೆಗೆ 26 ಮಂದಿಯನ್ನು ಬಂಧಿಸಿದ್ದಾರೆ.

Edited By : Nirmala Aralikatti
PublicNext

PublicNext

11/06/2026 12:06 pm

Cinque Terre

8.77 K

Cinque Terre

1

ಸಂಬಂಧಿತ ಸುದ್ದಿ