ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಸಾರ್ವಜನಿಕರ ಆಕ್ರೋಶ ಭುಗಿಲೆದ್ದಿದ್ದು, ತೃಣಮೂಲ ಕಾಂಗ್ರೆಸ್ (TMC) ಪಕ್ಷದ ಮಹಿಳಾ ನಾಯಕಿಯೊಬ್ಬರಿಗೆ ಸ್ಥಳೀಯರು ಸಾರ್ವಜನಿಕವಾಗಿಯೇ ಬಿಳಿ ಸೀರೆ ತೊಡಿಸಿ ತೀವ್ರ ಪ್ರತಿಭಟನೆ ನಡೆಸಿದ್ದಾರೆ. ಈ ನಾಟಕೀಯ ಘಟನೆಯು ರಾಜ್ಯದಲ್ಲಿ ರಾಜಕೀಯ ಉದ್ವಿಗ್ನತೆಯನ್ನು ಮತ್ತಷ್ಟು ಹೆಚ್ಚಿಸಿದೆ.
ಟಿಎಂಸಿ ಇತ್ತೀಚಿನ ಚುನಾವಣೆಯಲ್ಲಿ ಹೀನಾಯ ಸೋಲು ಕಂಡ ಬೆನ್ನಲ್ಲೇ ಈ ಪ್ರತಿಕಾರದ ಘಟನೆ ನಡೆದಿದೆ. ಈ ಮಹಿಳಾ ನಾಯಕಿ ಈ ಹಿಂದೆ ಬಿಜೆಪಿ ಕಾರ್ಯಕರ್ತರ ಮನೆಗಳಿಗೆ ಬಿಳಿ ಸೀರೆಗಳನ್ನು ಕಳುಹಿಸಿ ಬೆದರಿಕೆ ಹಾಕುತ್ತಿದ್ದರು ಎಂಬ ಗಂಭೀರ ಆರೋಪವಿತ್ತು. ಬಂಗಾಳದಲ್ಲಿ ಬಿಳಿ ಸೀರೆ ಕಳುಹಿಸುವುದು ಎಂದರೆ ವೈಧವ್ಯದ ಸಂಕೇತ ಹಾಗೂ ಕೊಲೆ ಬೆದರಿಕೆ ಎಂದೇ ಅರ್ಥೈಸಲಾಗುತ್ತದೆ. ಇದು ಸ್ಥಳೀಯರಲ್ಲಿ ಆಳವಾದ ಆಕ್ರೋಶಕ್ಕೆ ಕಾರಣವಾಗಿತ್ತು.
ತಮ್ಮ ನಾಯಕಿಯ ಹಿಂದಿನ ಕೃತ್ಯದಿಂದ ತೀವ್ರ ಆಕ್ರೋಶಗೊಂಡಿದ್ದ ಸಾರ್ವಜನಿಕರು, ಇದೀಗ ಆಕೆಯನ್ನು ಸುತ್ತುವರಿದು, ಆಕೆಯ ಕೃತ್ಯಕ್ಕೆ ಪ್ರತಿಯಾಗಿ ಅದೇ ಬಿಳಿ ಸೀರೆಯನ್ನು ಬಲವಂತವಾಗಿ ಉಡಿಸಿ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ. ಇದನ್ನು 'ಕರ್ಮದ ರಿಟರ್ನ್ಸ್' ಎಂದೇ ಬಣ್ಣಿಸಲಾಗುತ್ತಿದೆ.
ಸಂದೇಶ್ಖಾಲಿ ಮತ್ತು ಬೀರ್ಭೂಮ್ ಭಾಗದಲ್ಲಿ ವಿರೋಧ ಪಕ್ಷದ ಕಾರ್ಯಕರ್ತರಿಗೆ ಬೆದರಿಕೆ ಹಾಕಲು ಈ ಸೀರೆಗಳನ್ನು ಸಂಗ್ರಹಿಸಿಡಲಾಗಿತ್ತು ಎನ್ನಲಾಗಿದ್ದು, ಈ ಹಿಂದೆ ಟಿಎಂಸಿ ಕಚೇರಿಗಳಿಂದ ಭಾರಿ ಪ್ರಮಾಣದ ಬಿಳಿ ಸೀರೆಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಸದ್ಯ ಅಧಿಕಾರ ಬದಲಾವಣೆಯ ಬಳಿಕ ರಾಜ್ಯದಲ್ಲಿ ರಾಜಕೀಯ ಉದ್ವಿಗ್ನತೆ ಹೆಚ್ಚಾಗಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಇನ್ನೂ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.
PublicNext
11/06/2026 01:49 pm
LOADING...