ಮಂಗಳೂರು: ಇಂದು ನಾಡಿನಲ್ಲೆಡೆ ಅಧಿಕ ಮಾಸದ ಏಕಾದಶಿ ಸಂಭ್ರಮ. ಮಹಾವಿಷ್ಣುವಿಗೆ ಪವಿತ್ರ ದಿನವಾದ ಇಂದು ಭಕ್ತರು ದಿನವಿಡೀ ಉಪವಾಸವಿದ್ದು ಭಗವಂತನ ಆರಾಧನೆ ಮಾಡುತ್ತಾರೆ.
ಮಂಗಳೂರಿನ ವಿ.ಟಿ.ರೋಡ್‌ನಲ್ಲಿರುವ ಶ್ರೀ ವಿಠೋಭ ರುಕುಮಾಯಿ ದೇವಸ್ಥಾನವು ಪರಮ ಏಕಾದಶಿಯ ದಿನದ ಸಂಭ್ರಮದ ಹಿನ್ನೆಲೆಯಲ್ಲಿ ಹಣ್ಣುಹಂಪಲು, ತರಕಾರಿಗಳಿಂದ ಶೃಂಗಾರಗೊಂಡು ಭಕ್ತರ ಆಕರ್ಷಣೆಗೆ ಪಾತ್ರವಾಗಿದೆ. ದೇವಸ್ಥಾನವು ಪ್ರವೇಶದ್ವಾರದಿಂದ ಹಿಡಿದು, ದೇವಸ್ಥಾನದ ಹಜಾರ, ಕಂಬಗಳು, ಆವರಣ, ಗರ್ಭಗುಡಿಯವರೆಗೂ ಹಣ್ಣುಗಳು, ತರಕಾರಿಗಳ ಅಲಂಕಾರಗಳ ದೃಶ್ಯ ವೈಭವವೇ ಕಂಡು ಬರುತ್ತಿದೆ.
ಬಾಳೆಗೊನೆಗಳು, ಹಲಸಿನ ಕಾಯಿ, ಮುಳ್ಳುಸೌತೆಗಳು ಪ್ರವೇಶ ದ್ವಾರದಲ್ಲೇ ಸ್ವಾಗತಿಸುತ್ತದೆ. ಜೊತೆಗೆ ಮೂಸಂಬಿ, ಡ್ರ್ಯಾಗನ್ ಫ್ರೂಟ್, ಆ್ಯಪಲ್, ರಾಂಬೂಟನ್, ಕಿತ್ತಳೆ, ಮಾವಿನಹಣ್ಣು, ಫೈನ್ ಆ್ಯಪಲ್, ಚೀನಿಕಾಯಿ, ತೊಂಡೆ, ಅಲಸಂಡೆ, ಸೌತೆ, ಕುಂಬಳಕಾಯಿ, ಅಲಂಕಾರಿಕ ಎಲೆಗಳು ಸೇರಿದಂತೆ ಸಾವಿರಾರು ಮೌಲ್ಯದ ಮತ್ತಿತರ ತರಕಾರಿ ಹಣ್ಣುಹಂಪಲುಗಳಿಂದ ಸಂಪೂರ್ಣ ದೇವಸ್ಥಾನ ಶೃಂಗಾರಗೊಂಡಿದೆ.
ಇಂದು ಬೆಳಗ್ಗೆಯಿಂದಲೇ ವಿವಿಧ ಭಜನಾ ಮಂಡಳಿಗಳಿಂದ ಭಜನಾ ಸಂಕೀರ್ತನೆ ನಡೆಯುತ್ತಿದ್ದು, ರಾತ್ರಿ 9ರವರೆಗೆ ಇಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿದೆ. ಭಕ್ತರ ದಂಡೇ ದೇವಸ್ಥಾನಕ್ಕೆ ಹರಿದು ಬರುತ್ತಿದೆ.
PublicNext
11/06/2026 04:05 pm
LOADING...