ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಇಂದು ರಾತ್ರಿಯೇ ದಾಳಿ ಮಾಡಿ ಇರಾನಿನ ಖಾರ್ಗ್‌ ದ್ವೀಪ ವಶಕ್ಕೆ ಪಡೆಯುತ್ತೇವೆ - ಟ್ರಂಪ್‌ ಎಚ್ಚರಿಕೆ

ವಾಷಿಂಗ್ಟನ್: ಇರಾನ್ ವಿರುದ್ಧ ಕಠಿಣ ಮಿಲಿಟರಿ ಕ್ರಮ ಹಾಗೂ ಆರ್ಥಿಕ ದಿಗ್ಬಂಧನ ವಿಧಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತೀವ್ರ ಎಚ್ಚರಿಕೆ ನೀಡಿದ್ದಾರೆ.

ಜೂನ್ 11ರಂದು ತಮ್ಮ 'ಟ್ರೂತ್ ಸೋಷಿಯಲ್' ಖಾತೆಯಲ್ಲಿ ಸರಣಿ ಸಂದೇಶಗಳನ್ನು ಪ್ರಕಟಿಸಿದ ಟ್ರಂಪ್, ಇರಾನ್ ವಿರುದ್ಧ ಅಮೆರಿಕ ಸೇನೆ ಯುದ್ಧ ಸಾರುವ ಸ್ಪಷ್ಟ ಮುನ್ಸೂಚನೆಗಳನ್ನು ನೀಡಿದ್ದಾರೆ.

ಇಂದು ರಾತ್ರಿಯೇ ಅಮೆರಿಕ ಸೇನೆಯು ಇರಾನ್ ಮೇಲೆ 'ಅತ್ಯಂತ ಬಲವಾದ ದಾಳಿ' (VERY HARD TONIGHT) ನಡೆಸಲಿದೆ ಎಂದು ಟ್ರಂಪ್ ನೇರವಾಗಿಯೇ ಘೋಷಿಸಿದ್ದಾರೆ. ಇರಾನ್‌ನ ನೌಕಾಪಡೆ, ವಾಯುಪಡೆ ಮತ್ತು ಪ್ರಮುಖ ರಕ್ಷಣಾ ವ್ಯವಸ್ಥೆಗಳು ಈಗಾಗಲೇ ಧ್ವಂಸಗೊಂಡಿವೆ ಎಂದು ಪ್ರತಿಪಾದಿಸಿರುವ ಅವರು, ಮುಂದಿನ ಹಂತವಾಗಿ ಇರಾನ್ ಬೆನ್ನೆಲುಬನ್ನು ಮುರಿಯಲು ಸಜ್ಜಾಗಿದ್ದಾರೆ.

ವೆನೆಜುವೆಲಾದಲ್ಲಿ ತಳೆದಿದ್ದ ಕಠಿಣ ನಿಲುವನ್ನೇ ಈಗ ಇರಾನ್ ಮೇಲೂ ಪ್ರಯೋಗಿಸಲು ಟ್ರಂಪ್ ಮುಂದಾಗಿದ್ದಾರೆ. ಇರಾನ್‌ನ ಅತ್ಯಂತ ಪ್ರಮುಖ ತೈಲ ರಫ್ತು ಕೇಂದ್ರವಾಗಿರುವ ಖಾರ್ಗ್ ದ್ವೀಪವನ್ನು (Kharg Island) ಅಮೆರಿಕವು ಮುಂದಿನ ದಿನಗಳಲ್ಲಿ ತನ್ನ ಸಂಪೂರ್ಣ ಮಿಲಿಟರಿ ನಿಯಂತ್ರಣಕ್ಕೆ ತೆಗೆದುಕೊಳ್ಳಲಿದೆ ಎಂದು ಅವರು ಬೆದರಿಕೆ ಹಾಕಿದ್ದಾರೆ. ಅಲ್ಲದೆ, ಇರಾನ್‌ನ ಒಟ್ಟು ತೈಲ ಮತ್ತು ಗ್ಯಾಸ್ ಮಾರುಕಟ್ಟೆಯನ್ನು ಅಮೆರಿಕ ತನ್ನ ವಶಕ್ಕೆ ಪಡೆಯಲಿದೆ ಎಂದೂ ಟ್ರಂಪ್ ಬರೆದುಕೊಂಡಿದ್ದಾರೆ.

ಇರಾನ್ ಅನ್ನು ಯಾವುದೇ ಷರತ್ತಿಲ್ಲದೆ ಶಾಂತಿ ಒಪ್ಪಂದಕ್ಕೆ ಒಪ್ಪುವಂತೆ ಮಣಿಸಲು ಟ್ರಂಪ್ ಈ ಅತ್ಯಂತ ಕಠಿಣ ಮತ್ತು ಆಕ್ರಮಣಕಾರಿ ನಿಲುವನ್ನು ತಳೆದಿದ್ದಾರೆ ಎಂದು ವಿಶ್ಲೇಷಿಸಲಾಗಿದೆ. ಖಾರ್ಗ್ ದ್ವೀಪವು ಇರಾನ್‌ನ ಒಟ್ಟು ಕಚ್ಚಾ ತೈಲ ರಫ್ತಿನ ಶೇ. 90ರಷ್ಟನ್ನು ನಿರ್ವಹಿಸುವ ಪ್ರಮುಖ ಕೇಂದ್ರವಾಗಿದೆ. ಅಮೆರಿಕ ಈ ದ್ವೀಪವನ್ನು ತನ್ನ ವಶಕ್ಕೆ ಪಡೆದರೆ, ಇರಾನ್ ಆರ್ಥಿಕವಾಗಿ ಸಂಪೂರ್ಣವಾಗಿ ಪತನಗೊಳ್ಳುವುದು ನಿಶ್ಚಿತ.

ಟ್ರಂಪ್ ಅವರ ಈ ದಿಢೀರ್ ಮತ್ತು ಆಕ್ರಮಣಕಾರಿ ಹೆಜ್ಜೆಯು ಮಧ್ಯಪ್ರಾಚ್ಯದಲ್ಲಿ ಯುದ್ಧದ ಭೀತಿಯನ್ನು ಹೆಚ್ಚಿಸಿದೆ. ಇದು ಜಾಗತಿಕವಾಗಿ ಕಚ್ಚಾ ತೈಲ ಬೆಲೆಯಲ್ಲಿ ಭಾರಿ ಏರಿಕೆಗೆ ಹಾಗೂ ಷೇರು ಮಾರುಕಟ್ಟೆಗಳಲ್ಲಿ ತಲ್ಲಣ ಸೃಷ್ಟಿಗೆ ಕಾರಣವಾಗುವ ಆತಂಕವನ್ನು ಮೂಡಿಸಿದೆ.

Edited By :
PublicNext

PublicNext

11/06/2026 07:40 pm

Cinque Terre

6.8 K

Cinque Terre

0

ಸಂಬಂಧಿತ ಸುದ್ದಿ