ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಕ್ರೆಬೈಲಿನ ಭೀಷ್ಮ ಆನೆಯ ಮಾವುತ ಸಿದ್ದಿಕ್ ಪಾಷಾ ಅನಾರೋಗ್ಯದಿಂದ ಸಾವು

ಶಿವಮೊಗ್ಗ: ಸಕ್ರೆಬೈಲಿನ ಆನೆ ಬಿಡಾರದಲ್ಲಿ ಭೀಷ್ಮ ಎಂಬ ಆನೆಯ ಮಾವುತರೊಬ್ಬರು ಅನಾರೋಗ್ಯದಿಂದ ಸಾವನ್ನಪ್ಪಿದ್ದಾರೆ. ಸಕ್ರೆಬೈಲಿನ ಸಿದ್ದಿಕ್ ಪಾಷಾ (39) ಮೃತಪಟ್ಟ ಮಾವುತರಾಗಿದ್ದಾರೆ.

ಸಿದ್ದಿಕ್ ಪಾಷಾರವರು ಈ ಹಿಂದೆ ಅನಾರೋಗ್ಯದಿಂದ ಬಳಲುತ್ತಿದ್ದರು, ಅಷ್ಟೇ ಅಲ್ಲದೆ ಅದಕ್ಕೆ ಚಿಕಿತ್ಸೆಯನ್ನು ಸಹ ಪಡೆದು ಬಂದಿದ್ದರು. ಆದರೆ ಕೆಲ ದಿನಗಳ ಹಿಂದೆ ಅವರಿಗೆ ಮತ್ತೊಮ್ಮೆ ಆರೋಗ್ಯ ಸಮಸ್ಯೆ ಬಾಧಿಸಿತ್ತು.

ಈ ಹಿನ್ನೆಲೆಯಲ್ಲಿ ಶಿವಮೊಗ್ಗದ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯಲು ಮುಂದಾಗಿದ್ದರು. ಆದರೆ ಅಲ್ಲಿ ಗುಣಮುಖರಾಗದ ಕಾರಣ, ವೈದ್ಯರು ಮಾವುತರನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲಿಸುವಂತೆ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಮಣಿಪಾಲ್ ಆಸ್ಪತ್ರೆಗೆ ತೆರಳುವ ಮಾರ್ಗಮಧ್ಯದಲ್ಲಿ ಮಾವುತ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಮಾವುತರ ಈ ಅನಿರೀಕ್ಷಿತ ಸಾವಿನಿಂದಾಗಿ ಸಕ್ರೆಬೈಲಿನ ಮಾವುತರು, ಕಾವಾಡಿಗಳು ಹಾಗೂ ಸಿಬ್ಬಂದಿಗಳು ಕಂಬನಿ ಮಿಡಿದಿದ್ದಾರೆ.

Edited By : Somashekar
PublicNext

PublicNext

12/06/2026 02:28 pm

Cinque Terre

9.27 K

Cinque Terre

0

ಸಂಬಂಧಿತ ಸುದ್ದಿ