ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪಶ್ಚಿಮ ಬಂಗಾಳ: ಬಡವರ ಪಾಲಿನ ಪರಿಹಾರ ಸಾಮಗ್ರಿಗಳ ಕಳ್ಳದಂಧೆ - ಹೂಗ್ಲಿಯಲ್ಲಿ ಇಬ್ಬರ ಬಂಧನ!

ಪಶ್ಚಿಮ ಬಂಗಾಳ : ಹೂಗ್ಲಿ ಜಿಲ್ಲೆಯಲ್ಲಿ ಸರ್ಕಾರಿ ಪರಿಹಾರ ಸಾಮಗ್ರಿಗಳ ಅಕ್ರಮ ಸಂಗ್ರಹ ಹಾಗೂ ಸಾಗಾಟ ಆರೋಪದ ಮೇಲೆ ದಾಳಿ ನಡೆಸಿ, ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.

ಠಾಣೆಗೆ ಬಂದ ಲಿಖಿತ ದೂರಿನಲ್ಲಿ, ಧನಿಯಾಖಾಲಿ ವ್ಯಾಪ್ತಿಯ ಕೋಟಲ್‌ಪುರದಲ್ಲಿರುವ ಆವರಣವೊಂದರಿಂದ ಕಂಬಳಿ, ಬೆಡ್‌ಶೀಟ್, ಡಸ್ಟ್‌ಬಿನ್, ಫುಟ್‌ಬಾಲ್ ಸೇರಿದಂತೆ ಹಲವು ಸರ್ಕಾರಿ ಪರಿಹಾರ ವಸ್ತುಗಳನ್ನು ಕಾನೂನುಬಾಹಿರವಾಗಿ ಸಂಗ್ರಹಿಸಿ ಸಾಗಿಸಲಾಗುತ್ತಿದೆ ಎಂದು ಆರೋಪಿಸಲಾಗಿತ್ತು.

ದೂರು ದಾಖಲಾದ ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು, ಕೋಟಲ್‌ಪುರದ ಆ ಆವರಣದ ಮೇಲೆ ದಾಳಿ ನಡೆಸಿದರು. ಈ ವೇಳೆ, ಅಕ್ರಮವಾಗಿ ಸಂಗ್ರಹಿಸಿ ಸಾಗಿಸಲಾಗುತ್ತಿದ್ದ ಬೃಹತ್ ಪ್ರಮಾಣದ ಸರ್ಕಾರಿ ಪರಿಹಾರ ಸಾಮಗ್ರಿಗಳನ್ನು ವಶಪಡಿಸಿಕೊಂಡು ಜಪ್ತಿ ಮಾಡಿದರು.

ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಹತ್ತು ದಿನಗಳ ಪೊಲೀಸ್ ಕಸ್ಟಡಿಗೆ ಪಡೆಯಲು ಕೋರಲಾಗಿದೆ.

Edited By : Abhishek Kamoji
PublicNext

PublicNext

12/06/2026 03:09 pm

Cinque Terre

21.48 K

Cinque Terre

0

ಸಂಬಂಧಿತ ಸುದ್ದಿ