ಅಂಕಾರಾ: ಆನ್‌ಲೈನ್ ವೇದಿಕೆಗಳ ಮೂಲಕ ವಯಸ್ಕರಿಗಾಗಿ ಉದ್ದೇಶಿತ ಅಶ್ಲೀಲ ವಿಡಿಯೋ ಹಾಗೂ ಲೈಂಗಿಕ ವಿಷಯಾಧಾರಿತ ಕಂಟೆಂಟ್ ಹಂಚಿಕೆ ಮಾಡಿ ಹಣ ಗಳಿಸುತ್ತಿದ್ದ ಆರೋಪದಲ್ಲಿ 27 ಜನ ನೀಲಿ ತಾರೆಯರು ಹಾಗೂ ಕಂಟೆಂಟ್ ಕ್ರಿಯೇಟರ್‌ಗಳಿಗೆ ಇಸ್ತಾನ್‌ಬುಲ್ ನ್ಯಾಯಾಲಯ ತಲಾ 10 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.
ಸೈಬರ್ ಅಪರಾಧಗಳ ವಿರುದ್ಧ ನಡೆಯುತ್ತಿರುವ ತನಿಖೆಯ ಭಾಗವಾಗಿ ಈ ಕ್ರಮ ಕೈಗೊಳ್ಳಲಾಗಿದೆ. ತನಿಖೆ ವೇಳೆ ಆರೋಪಿಗಳು ಚಂದಾದಾರಿಕೆ ಆಧಾರಿತ ಡಿಜಿಟಲ್ ವೇದಿಕೆಗಳು ಹಾಗೂ ವಿವಿಧ ವೆಬ್‌ಸೈಟ್‌ಗಳ ಮೂಲಕ ವಯಸ್ಕರ ಕಂಟೆಂಟ್ ಪ್ರಸಾರ ಮಾಡಿ ಆರ್ಥಿಕ ಲಾಭ ಗಳಿಸುತ್ತಿದ್ದರು ಎಂಬ ಆರೋಪಗಳು ಬೆಳಕಿಗೆ ಬಂದಿವೆ.
ಟರ್ಕಿಯಲ್ಲಿ 2023ರಿಂದಲೇ ಕೆಲವು ವಯಸ್ಕರ ವೆಬ್‌ಸೈಟ್‌ಗಳ ಮೇಲೆ ನಿರ್ಬಂಧ ಹೇರಲಾಗಿತ್ತು. ಆದರೆ ಆರೋಪಿಗಳು ವಿವಿಧ ತಾಂತ್ರಿಕ ವಿಧಾನಗಳನ್ನು ಬಳಸಿ ತಮ್ಮ ಚಟುವಟಿಕೆಗಳನ್ನು ಮುಂದುವರಿಸಿದ್ದಾರೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ.
ಈ ಕುರಿತು ಬಂದ ದೂರುಗಳ ಆಧಾರದ ಮೇಲೆ ಇಸ್ತಾನ್‌ಬುಲ್ ಮುಖ್ಯ ಸಾರ್ವಜನಿಕ ಅಭಿಯೋಜಕರ ಕಚೇರಿ ಸಮಗ್ರ ತನಿಖೆ ನಡೆಸಿತ್ತು. ಪ್ರಕರಣದ ವಿಚಾರಣೆ ಪೂರ್ಣಗೊಂಡ ಬಳಿಕ ನ್ಯಾಯಾಲಯ 27 ಜನ ನೀಲಿ ತಾರೆಯರು ಹಾಗೂ ಕಂಟೆಂಟ್ ಕ್ರಿಯೇಟರ್‌ಗಳಿಗೆ ತಲಾ 10 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.
PublicNext
12/06/2026 03:49 pm
LOADING...