ಬೆಂಗಳೂರು: ಪಬ್ಲಿಕ್ ನೆಕ್ಸ್ಟ್ ತಂಡ ಇಂದು ಮತ್ತೊಂದು ವಾರ್ಡ್ ಸಮೀಕ್ಷೆಗೆ ಕಾಲಿಟ್ಟಿದೆ. ಈ ಬಾರಿ ನಾವು ಭೇಟಿ ನೀಡಿರುವುದು ಚಿಕ್ಕ ಪೇಟೆ ವಾರ್ಡ್ ಗೆ
ಒಂದು ವಾರ್ಡ್ ಅಂದ ಮೇಲೆ ಅಲ್ಲಿನ ಜನರ ಬದುಕು ಹೇಗಿದೆ? ಅಲ್ಲಿನ ಮೂಲಸೌಕರ್ಯಗಳು ಜನರ ನಿರೀಕ್ಷೆಗೆ ತಕ್ಕಂತೆ ಇವೆಯೇ? ಎಂಬ ಸತ್ಯವನ್ನು ಹುಡುಕುತ್ತಾ ನಮ್ಮ ತಂಡ ಇಂದು ಮೈದಾನಕ್ಕಿಳಿದಿದೆ.ಈ ಭಾಗದಲ್ಲಿ ರಸ್ತೆಗಳ ಸ್ಥಿತಿ ಹೇಗಿದೆ? ಮಳೆ ಬಂದರೆ ಗುಂಡಿಗಳು ಕೆರೆಯಂತಾಗುತ್ತವೆಯೇ? ಕುಡಿಯುವ ನೀರು ಮತ್ತು ಒಳಚರಂಡಿ ವ್ಯವಸ್ಥೆ ಸುಗಮವಾಗಿದೆಯೇ ಅಥವಾ ಪ್ರತಿ ದಿನವೂ ನಿವಾಸಿಗಳು ನರಕಯಾತನೆ ಅನುಭವಿಸುತ್ತಿದ್ದಾರೆಯೇ? ಕಸದ ವಿಲೇವಾರಿ ಮತ್ತು ಬೀದಿ ದೀಪಗಳ ಸ್ಥಿತಿ ಏನು?
ಬರೀ ಅಂಕಿ-ಅಂಶಗಳಲ್ಲ, ನೇರವಾಗಿ ಈ ವಾರ್ಡ್‌ನ ನಿವಾಸಿಗಳನ್ನೇ ಮಾತನಾಡಿಸಿ, ವರ್ಷಗಳಿಂದ ಬಗೆಹರಿಯದ ಸಮಸ್ಯೆಗಳ ಬಗ್ಗೆ ಅವರ ಅಳಲನ್ನು ಕೇಳಲಿದ್ದೇವೆ. ಆಡಳಿತ ಮಂಡಳಿಯ ಬಗ್ಗೆ ಜನರ ಅಭಿಪ್ರಾಯವೇನು? ಮುಂದಿನ ದಿನಗಳಲ್ಲಿ ಅವರಿಗೆ ಬೇಕಿರುವ ತುರ್ತು ಬದಲಾವಣೆಗಳೇನು? ಎಂಬುದರ ಕಂಪ್ಲೀಟ್ ರಿಪೋರ್ಟ್ ನಿಮ್ಮ ಮುಂದಿಡಲಿದ್ದೇವೆ.
ಚಿಕ್ಕಪೇಟೆ ವಾರ್ಡ್‌ನ ಗ್ರೌಂಡ್ ರಿಪೋರ್ಟ್ ತಿಳಿಯಲು ನೋಡ್ತಾ ಇರಿ ಪಬ್ಲಿಕ್ ನೆಕ್ಸ್ಟ್ ನಿಮ್ಮ ವಾರ್ಡ್, ನಿಮ್ಮ ಸಮಸ್ಯೆ, ನಮ್ಮ ಧ್ವನಿ
PublicNext
12/06/2026 04:22 pm
LOADING...