ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾಂತಾರ ನಟಿಯ ಡೀಪ್‌ ಫೇಕ್ ಕೇಸ್‌, ಆರೋಪಿಗಳ ಬ್ಯಾಕ್ ಗ್ರೌಂಡ್ ಕೇಳಿ ಪೊಲೀಸ್ರೇ ಶಾಕ್

ಬೆಂಗಳೂರು: ಕಾಂತಾರ ನಟಿ ರುಕ್ಮಿಣಿ ವಸಂತ ಅವರ ಎಐ ಆಧಾರಿತ ಅಶ್ಲೀಲ ಡೀಪ್‌ಫೇಕ್ ಫೋಟೋ ವೈರಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಮೂವರು ಆರೋಪಿಗಳ ಉನ್ನತ ಶಿಕ್ಷಣ ಹಾಗೂ ವೃತ್ತಿಪರ ಹಿನ್ನೆಲೆ ಸೈಬರ್ ಪೊಲೀಸರನ್ನೇ ಬೆಚ್ಚಿಬೀಳಿಸಿದೆ. ಬಿಎಸ್‌ಸಿ ನರ್ಸಿಂಗ್ ವಿದ್ಯಾರ್ಥಿ, ಸಾಫ್ಟ್‌ವೇರ್ ಇಂಜಿನಿಯರ್ ಮತ್ತು ಚಾರ್ಟರ್ಡ್ ಅಕೌಂಟೆಂಟ್ ಕಂಪನಿ ಉದ್ಯೋಗಿಯಂತಹ ಉತ್ತಮ ಹಿನ್ನೆಲೆಯುಳ್ಳವರು ಇಂತಹ ಕೃತ್ಯದಲ್ಲಿ ಭಾಗಿಯಾಗಿರುವುದು ಆಶ್ಚರ್ಯ ಮೂಡಿಸಿದೆ.

ಈ ಪ್ರಕರಣದಲ್ಲಿ ಬಂಧಿತರಾಗಿರುವ ರವಿಕುಮಾರ್ (24), ಚಂದ್ರಕಾಂತ್ (33) ಮತ್ತು ರಂಜಿತ್ (25) ಅವರನ್ನು ಸೈಬರ್ ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಬಾಗಲಕೋಟೆ ನಿವಾಸಿಯಾಗಿರುವ ರವಿಕುಮಾರ್, ಬೆಂಗಳೂರು ನಿವಾಸಿ ರಂಜಿತ್ ಮತ್ತು ಮೂಲತಃ ತೀರ್ಥಹಳ್ಳಿಯವರಾದ ಚಂದ್ರಕಾಂತ್ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ.

ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಒಬ್ಬನಾದ ರವಿಕುಮಾರ್ ಬಿಎಸ್‌ಸಿ ನರ್ಸಿಂಗ್ ಓದುತ್ತಿದ್ದಾನೆ. ತನ್ನದೇ ಆದ ಯೂಟ್ಯೂಬ್ ಚಾನೆಲ್ ಹೊಂದಿರುವ ರವಿಕುಮಾರ್, ಕೆಲವು ದಿನಗಳ ಹಿಂದೆ ಯೂಟ್ಯೂಬ್‌ನಿಂದ ಹಣ ಗಳಿಸಲು ಆರಂಭಿಸಿದ್ದ. ಇದಾದ ನಂತರ, ಡೀಪ್‌ಫೇಕ್ ವಿಡಿಯೋಗಳನ್ನು ಸೃಷ್ಟಿಸಿ ಅಪ್‌ಲೋಡ್ ಮಾಡಲು ಶುರು ಮಾಡಿದ್ದ ಎಂದು ತನಿಖೆಯಿಂದ ತಿಳಿದುಬಂದಿದೆ.

ಮತ್ತೊಬ್ಬ ಆರೋಪಿ ರಂಜಿತ್ ಕುಮಾರ್ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದು, ವಾರ್ಷಿಕ 20 ಲಕ್ಷ ರೂಪಾಯಿಗಳ ಉತ್ತಮ ವೇತನ ಪ್ಯಾಕೇಜ್ ಹೊಂದಿದ್ದ. ಎಲ್ಲಾ ನಟಿಯರ ಡೀಪ್‌ಫೇಕ್ ಎಐ ವಿಡಿಯೋಗಳನ್ನು ಸೃಷ್ಟಿಸುತ್ತಿದ್ದ ಈತ, ಕೇವಲ 'ಮೋಜು' (fun) ಮಾಡಲು ಈ ಕೃತ್ಯ ಎಸಗುತ್ತಿರುವುದಾಗಿ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ.

ಮೂರನೇ ಆರೋಪಿ ಚಂದ್ರಕಾಂತ್ ಚಾರ್ಟರ್ಡ್ ಅಕೌಂಟೆಂಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಈತನಿಗೂ ಉತ್ತಮ ಸಂಬಳ ಬರುತ್ತಿತ್ತು. ಇತರೆ ಆರೋಪಿಗಳಂತೆ, ತಾನು ಕೂಡ ನಟಿಯರ ಡೀಪ್‌ಫೇಕ್ ವಿಡಿಯೋಗಳನ್ನು 'ಮಜಾ' ತೆಗೆದುಕೊಳ್ಳಲು ಮಾಡುತ್ತಿದ್ದೆ ಎಂದು ಒಪ್ಪಿಕೊಂಡಿದ್ದಾನೆ.

ಸೈಬರ್ ಪೊಲೀಸರು ಬಂಧಿತರಿಂದ ಕೃತ್ಯಕ್ಕೆ ಬಳಸಿದ್ದ ಮೂರು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳು ಎಐ ತಂತ್ರಜ್ಞಾನವನ್ನು ಬಳಸಿ ಈ ವಿಡಿಯೋ ಹಾಗೂ ಫೋಟೋಗಳನ್ನು ಸೃಷ್ಟಿಸಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದರು. ಮೂವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಪೊಲೀಸ್ ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ.

Edited By : Manjunath H D
PublicNext

PublicNext

20/06/2026 05:32 pm

Cinque Terre

6.66 K

Cinque Terre

0

ಸಂಬಂಧಿತ ಸುದ್ದಿ