ಬೆಂಗಳೂರು: ರಿಹ್ಯಾಬ್ ನಲ್ಲಿ ಅಡ್ಮಿಟ್ ಆದವರು ಸತ್ತಿರೋದು. ಅಲ್ಲಿನ ಸಿಬ್ಬಂದಿ ಹೊಡೆದು ಸಾಯಿಸಿದ್ದಾರೆ ಅನ್ನೋ ಪ್ರಕರಣಗಳನ್ನು ನೀವು ಕೇಳಿರ್ತಿರಾ? ಆದ್ರೆ ರಿಹ್ಯಾಬ್ ನ ಮಾಲೀಕನನ್ನೇ ಕೊಲೆ ಮಾಡಿರೋ ಆತಂಕಕಾರಿ ಘಟನೆ ಬೆಂಗಳೂರಲ್ಲಿ ನಡೆದಿದೆ. ಅನೇಕ ವರ್ಷಗಳಿಂದ ಎಷ್ಟೋ ಜನರಿಗೆ ಕುಡಿತ ಬಿಡಿಸಿ ಭವಿಷ್ಯ ಕಟ್ಟಿಕೊಟ್ಟಿದ್ದ ಆ ಮಾಲೀಕ. ಆದರೆ, ಅದೇ ಮಾಲೀಕನಿಗೆ ರಿಹ್ಯಾಬ್ ನಲ್ಲಿದ್ದವರೇ ಚಟ್ಟ ಕಟ್ಟಿ ಪರಾರಿಯಾಗಿದ್ದಾರೆ.
ಇದು ಚಂದ್ರಲೇಔಟ್ ನ ಠಾಣಾ ವ್ಯಾಪ್ತಿಯ BCC ಬಡಾವಣೆಯಲ್ಲಿರೋ ನ್ಯೂ ಲೈಫ್ ರಿಹ್ಯಾಬ್ ಸೆಂಟರ್. ಕಳೆದ ಅನೇಕ ವರ್ಷಗಳಿಂದ ಕುಡಿತದ ಚಟಕ್ಕೆ ಬಿದ್ದವರಿಗೆ ಒಳ್ಳೆಯ ಭವಿಷ್ಯ ಕಟ್ಟಿಕೊಡ್ತಿದ್ದ ಕೇಂದ್ರ. ಆದರೆ, ಇದೇ ರಿಹ್ಯಾಬ್ ಸೆಂಟರ್ ಮಾಲೀಕನನ್ನೇ ಕುಡುಕರ ಗ್ಯಾಂಗ್ ಮಚ್ಚು, ರಾಡ್ ನಿಂದ ಹೊಡೆದು ಭೀಕರವಾಗಿ ಹತ್ಯೆ ಮಾಡಿದ್ದಾರೆ.
60 ವರ್ಷದ ಶಿವಲಿಂಗಯ್ಯ ಎಂಬುವರನ್ನೇ ರಿಹ್ಯಾಬ್ ಸೆಂಟರ್ ನಲ್ಲಿ ಇನ್ ಚಾರ್ಜ್ ರೀತಿ ಇದ್ದ ನಿತಿನ್, ಕಾರ್ತಿಕ್, ಸೋಹೆಲ್ ಪಾಷ ಸೇರಿ 9 ಮಂದಿ ಕೊಲೆ ಮಾಡಿರೋದು. ಆಗಿದ್ದೇನೆಂದ್ರೆ ಇಂದು ಮಧ್ಯಾಹ್ನ ರಿಯ್ಯಾಬ್ ಗೆ ಬಂದಿದ್ದ ಶಿವಲಿಂಗಯ್ಯ ಮತ್ತು ಆರೋಪಿಗಳ ಮಧ್ಯೆ ಯಾವುದೋ ವಿಚಾರಕ್ಕೆ ಜಗಳ ಶುರುವಾಗಿದೆ. ಈ ವೇಳೆ ಮೊದಲ ಮಹಡಿಯ ರೂಮ್ ಬಾಗಿಲು ಹಾಕಿ ಶಿವಲಿಂಗಯ್ಯನ ಮೇಲೆ ಹಲ್ಲೆ ಶುರು ಮಾಡಿದ್ದಾರೆ. ಇದರಿಂದ ಶಿವಲಿಂಗಯ್ಯ ಸ್ಥಳದಲ್ಲೇ ಉಸಿರು ಚೆಲ್ಲಿದ್ದಾರೆ.
ಇನ್ನು ಶಿವಲಿಂಗಯ್ಯ ಕೊಲೆ ಬಳಿಕ ಮತ್ತೊಬ್ಬನ ಮೇಲೂ ಹಲ್ಲೆ ಮಾಡಿದ್ದಾರೆ. ಹಾಗೆ ಕೊಲೆ ಮಾಡಿ ಮಾಲೀಕನ ಕಾರು ಹಾಗೂ ಬೈಕ್ ತಗೊಂಡು ಎಸ್ಕೇಪ್
ಆಗಿದ್ದಾರೆ. ವಿಚಾರ ತಿಳಿದು ಸ್ಥಳಕ್ಕೆ ಭೇಟಿ ನೀಡಿದ್ದ ಚಂದ್ರ ಲೇಔಟ್ ಪೊಲೀಸರು ಮತ್ತು ಡಿಸಿಪಿ ಯತೀಶ್ ಪರಿಶೀಲನೆ ನಡೆಸಿದ್ರು. ಆದರೆ, ಆರೋಪಿಗಳು ಇಂಥ ಭೀಕರ ಕೃತ್ಯ ಎಸಗಲು ಕಾರಣ ಏನು ಅನ್ನೋದು ಗೊತ್ತಾಗಿಲ್ಲ.
ಸದ್ಯ ಚಂದ್ರಲೇಔಟ್ ಪೊಲೀಸ್ ಠಾಣೆಯಲ್ಲಿ ಕೊಲೆ ಕೇಸ್ ದಾಖಲಾಗಿದೆ. ಆರೋಪಿಗಳು ಯಾರು ಅನ್ನೋದು ಗೊತ್ತಾಗಿದ್ದು, ಹುಡುಕಾಟ ಶುರುವಾಗಿದೆ.
PublicNext
19/06/2026 07:41 pm