ಬೆಂಗಳೂರು: ಅಗರ ಬತ್ತಿ, ಮೇಣದ ಬತ್ತಿ, ಮ್ಯಾಪ್‌ಗಳ ತಯಾರಿ ಕೆಲಸ ಅಂತ ಹೇಳಿ ಪಂಗನಾಮ ಹಾಕಲಾಗಿದೆ. ಒಂದು ಲಕ್ಷ ಹೂಡಿಕೆ ಮಾಡಿದರೆ ತಿಂಗಳಿಗೆ 20 ರಿಂದ 28 ಸಾವಿರ ಲಾಭ ನೀಡುವುದಾಗಿ ಹೇಳಿ ಎಸ್ಎಲ್‌ವಿ ಮಹಿಳಾ ಮಾರ್ಟ್ ಮತ್ತು ಮಾರ್ಕೆಟಿಂಗ್ ಕಂಪನಿ ಹೆಸರಲ್ಲಿ ಹಣ ಪಡೆದು ವಂಚನೆ ಮಾಡಿದ್ದಾರೆ.
ಆಂಧ್ರ ಮೂಲದ ಬೊಮ್ಮಲ ರಾಜೇಶ್ ಎಂಬುವವನಿಂದ ವಂಚನೆ ನಡೆದಿದೆ. ವಂಚನೆ ಮಾಡಿದ 09 ಜನರ ವಿರುದ್ಧ ಹೊಸಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೊಸಕೋಟೆ ಹೊರವಲಯದ ನಿಸರ್ಗ ಬಡಾವಣೆಯಲ್ಲಿ ವಂಚಕರು ಕಚೇರಿ ಓಪನ್ ಮಾಡಿ ಪ್ರತಿ ತಿಂಗಳು ಕಚ್ಚಾ ಸಾಮಗ್ರಿ ನೀಡಿ ಮನೆಯಿಂದಲೇ ಮೇಣದ ಬತ್ತಿ ಅಗರಬತ್ತಿ ಮತ್ತು ನೆಲ ಒರೆಸುವ ಮ್ಯಾಪ್ ಮಾಡಿಸಿ ಕಂಪನಿ ಖರೀದಿ ಮಾಡುವುದಾಗಿ ವಂಚಕರು ಹೇಳಿದ್ದಾರೆ. ಕೆಲಸದ ಜೊತೆಗೆ ಒಂದು ಲಕ್ಷ ಹಣ ಡೆಪಾಸಿಟ್ ಮಾಡಿದರೆ ತಿಂಗಳಿಗೆ 28 ಸಾವಿರ ಹಣ ನೀಡುವುದಾಗಿ ಗ್ಯಾಂಗ್ ಹೇಳಿದೆ.ಹಣದ ಆಸೆಗೆ ಬಿದ್ದು ಸಾಲ ಸೂಲ ಮಾಡಿ 1 ರಿಂದ 10 ಲಕ್ಷ ವರೆಗೂ ಮಹಿಳೆಯರು ಹಣ ಡೆಪಾಸಿಟ್ ಮಾಡಿದ್ದರು.
PublicNext
19/06/2026 07:08 pm
LOADING...