ಬೆಂಗಳೂರು: ಜಲಮಂಡಳಿಯ ಪ್ಲ್ಯಾಂಟ್ ಗೆ ಬಿದ್ದು ಇಬ್ಬರು ಕಣ್ಮರೆ ಆಗಿದ್ದಾರೆ. ಮಹದೇವಪುರ ವಿಧಾನಸಭಾ ಕ್ಷೇತ್ರದ ಬೆಳೆಗೆರೆ ಮುಖ್ಯ ರಸ್ತೆಯಲ್ಲಿ ನಡೆದ ಘಟನೆ ಅನ್ನೋ ಮಾಹಿತಿ ಲಭ್ಯ ಆಗಿದೆ. ಕೆಲಸ ಮಾಡುವಾಗ ಕಾರ್ಮಿಕರು ಪ್ಲ್ಯಾಂಟ್ ಗೆ ಬಿದ್ದ ಮಾಹಿತಿ ಸಿಕ್ಕಿದೆ.
ಒಬ್ಬರು ಪತ್ತೆ ಆಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಪ್ಲಾಂಟ್ ಗೆ ಬಿದ್ದ ಇನ್ನಿಬ್ಬರು ನಾಪತ್ತೆ ಆಗಿದ್ದು ಹುಡುಕಾಟ ಮುಂದುವರೆದಿದೆ. ಬೆಳಗೆರೆಯಲ್ಲಿ ಸಂಜೆ 6ಗಂಟೆ ಸುಮಾರಿಗೆ ನಡೆದ ಘಟನೆ ಅನ್ನೋ ಮಾಹಿತಿ ಲಭ್ಯ ಆಗಿದೆ. ಘಟನಾ ಸ್ಥಳಕ್ಕೆ ವರ್ತೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
PublicNext
19/06/2026 07:34 am
LOADING...