ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಕೆ .ಆರ್. ಪುರ ದ ತೂಗು ಸೇತುವೆ ಮೇಲೆ ಜಿಬಿಎ ಕಸದ ವಾಹನ ಪಲ್ಟಿ

ಬೆಂಗಳೂರು: ಕೆ.ಆರ್. ಪುರದ ತೂಗು ಸೇತುವೆ ಮೇಲೆ ಇಂದು ಬೆಳಗ್ಗೆ ಕಾಂಟ್ರಾಕ್ಟ್ ಆಧಾರಿತ ತ್ಯಾಜ್ಯ ಸಾಗಣೆ ವಾಹನವೊಂದು ಪಲ್ಟಿಯಾಗಿದೆ.

ಈ ಘಟನೆಯಿಂದಾಗಿ ಕೆ.ಆರ್. ಪುರದಿಂದ ನಗರಕ್ಕೆ ಮತ್ತು ನಗರದಿಂದ ಕೆ.ಆರ್. ಪುರಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ಸೇತುವೆಯ ಮೇಲೆ ಐದು ಕಿಲೋಮೀಟರ್‌ಗೂ ವಾಹನ ದಟ್ಟಣೆ ಉಂಟಾಗಿ ಭಾರೀ ಟ್ರಾಫಿಕ್ ಜಾಮ್ ಸೃಷ್ಟಿಯಾಗಿದೆ.

ಲೋಡ್ ಆಗಿದ್ದ ತ್ಯಾಜ್ಯ ಸಾಗಣೆ ವಾಹನ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದು, ಇದರಿಂದಾಗಿ ಸೇತುವೆಯುದ್ದಕ್ಕೂ ವಾಹನಗಳು ಸಾಲುಗಟ್ಟಿ ನಿಂತಿವೆ. ಈ ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿ ಆಂಬುಲೆನ್ಸ್‌ ಸೇರಿ ಹಲವು ವಾಹನ ಸವಾರರು ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಪರದಾಡಿದ್ದಾರೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಸಂಚಾರಿ ಪೊಲೀಸರು ತಕ್ಷಣವೇ ಸ್ಥಳಕ್ಕೆ ಧಾವಿಸಿ ಟ್ರಾಫಿಕ್ ನಿಯಂತ್ರಿಸಲು ಹರಸಾಹಸ ಪಟ್ಟರು.

ಪಲ್ಟಿಯಾದ ವಾಹನದಿಂದ ರಸ್ತೆಗೆ ಬಿದ್ದಿದ್ದ ಕಸವನ್ನು ಸ್ಥಳೀಯರ ಸಹಕಾರದೊಂದಿಗೆ ಮತ್ತೆ ವಾಹನಕ್ಕೆ ಲೋಡ್ ಮಾಡಲಾಯಿತು. ಮಹದೇವಪುರ ಸಂಚಾರಿ ಪೊಲೀಸ್ ಇನ್ಸ್‌ಪೆಕ್ಟರ್ ಬಸವರಾಜ್ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ, ಕಸ ತೆರವು ಕಾರ್ಯವನ್ನು ಪರಿಶೀಲಿಸಿದರು.

ಈ ಘಟನೆ ಸಂಬಂಧ ಕಾಂಟ್ರಾಕ್ಟ್ ಆಧಾರಿತ ವಾಹನದ ಚಾಲಕನ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.

Edited By :
PublicNext

PublicNext

18/06/2026 08:51 am

Cinque Terre

9.78 K

Cinque Terre

0

ಸಂಬಂಧಿತ ಸುದ್ದಿ