ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ವಿಡಿಯೋ ಮಾಡಿ ಸೂಸೈಡ್ ಮಾಡಿಕೊಂಡ ಯುವಕ - ಸುಳ್ಳು ಅಟ್ರಾಸಿಟಿಗೆ ಬಲಿಯಾಯ್ತು ಜೀವ!

ಕೆ.ಆರ್.ಪುರ: ಚನ್ನಸಂದ್ರದ ನಿವಾಸಿ Dry Fruits ಸಂಸ್ಥೆಯ ಮಾಲೀಕ ಪಾಪಣ್ಣ (43) ಇವರು ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ. ತಮ್ಮ ಮೇಲೆ ಅಟ್ರಾಸಿಟಿ ಪ್ರಕರಣ ದಾಖಲಾಗಿದ್ದರಿಂದ ಮನನೊಂದು, ರಾತ್ರಿ ಇಲಿ ಕೊಲ್ಲಲು ಬಳಸುವ ಮಾತ್ರೆಗಳನ್ನು ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಸುಳ್ಳು ಅಟ್ರಾಸಿಟಿ ಪ್ರಕರಣ ಹೇಗೆ ಒಬ್ಬ ಮನುಷ್ಯನ ಜೀವವನ್ನು ಅಂತ್ಯ ಮಾಡುತ್ತದೆ ಎಂಬುದಕ್ಕೆ ಇಂದು ನಡೆದಿರುವ ಈ ಘಟನೆಯೇ ಸಾಕ್ಷಿಯಾಗಿದೆ. ಇಂದು ಬೆಂಗಳೂರು ನಗರದ ಕಾಡುಗೋಡಿ ಚನ್ನಸಂದ್ರದಲ್ಲಿ ನಡೆದಿರುವ ದಾರುಣ ಘಟನೆಯೊಂದು ಜನರನ್ನು ಬೆಚ್ಚಿಬೀಳಿಸಿದೆ.

ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಪಾಪಣ್ಣ ವಿಡಿಯೋದಲ್ಲಿ ಕೆಲವು ವಿಚಾರಗಳನ್ನು ಸಹ ಬಿಚ್ಚಿಟ್ಟಿದ್ದಾರೆ. ಅಸಲಿಗೆ ಆ ವಿಡಿಯೋದಲ್ಲಿ ಅಂಥದ್ದೇನಿದೆ ಗೊತ್ತಾ? " ಜೋಗಿ ಶೀನಾ, ಪ್ರಶಾಂತ್, ಸಂತೋಷ್, ಲಲಿತ್ ಕುಮಾರ್ ಮತ್ತು ಅವರ ಕುಟುಂಬದವರು ನನ್ನ ಸಾವಿಗೆ ಕಾರಣರು. ಸುಳ್ಳು ಅಟ್ರಾಸಿಟಿ ಕೇಸ್ ಹಾಕಿ ಹಿಂಸೆ ಮಾಡುತ್ತಿದ್ದಾರೆ. ನಮ್ಮ ಕುಟುಂಬವನ್ನು ನನ್ನ ತಂಗಿ ಭಾಗ್ಯರನ್ನು ಕಾಪಾಡಿ" ಎಂದು ಹೇಳಿಕೊಂಡಿದ್ದಾರೆ. ಈ ವಿಡಿಯೋವನ್ನು ಅವರು ತಮ್ಮ ತಂಗಿಗೆ ಕಳುಹಿಸಿದ್ದು, ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ಆ ವಿಡಿಯೋ ಹರಿದಾಡುತ್ತಿದೆ.

ಘಟನೆಯ ಹಿನ್ನೆಲೆಯನ್ನು ನೋಡುವುದಾದ್ರೆ, 2021ರಲ್ಲಿ ಇದೇ ಕುಟುಂಬ ಪಾಪಣ್ಣ ವಿರುದ್ಧ ಅಟ್ರಾಸಿಟಿ ಕೇಸ್ ಹಾಕಿ, 10 ಲಕ್ಷ ರೂಪಾಯಿ ಡಿಮ್ಯಾಂಡ್ ಮಾಡಿದ್ದರೆಂಬ ಆರೋಪ ಕೇಳಿ ಬರುತ್ತಿದೆ. ಇದೀಗ ಮತ್ತೆ ಸುಳ್ಳು ಕೇಸ್ ಹಾಕಿ ಹಣಕ್ಕಾಗಿ ನನ್ನ ಮೇಲೆ ಒತ್ತಡ ತಂದಿದ್ದಾರೆ ಎಂಬ ಆರೋಪ ವಿಡಿಯೋದಲ್ಲಿ ಕಂಡುಬಂದಿದೆ. ಇದರಿಂದ ಮನನೊಂದು ಪಾಪಣ್ಣ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಕಾಡುಗೋಡಿ ಪೊಲೀಸರು ತಕ್ಷಣವೇ ಕ್ರಮ ಕೈಗೊಂಡು, ಜೋಗಿ ಶೀನಾ, ಪ್ರಶಾಂತ್, ಸಂತೋಷ್ ಸೇರಿದಂತೆ ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ. ಮೃತ ಪಾಪಣ್ಣ ಅವರ ತಂಗಿ ಭಾಗ್ಯ ನೀಡಿದ ದೂರಿನ ಮೇರೆಗೆ ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು. ಈ ಕುರಿತು ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ವಿಚಾರಣೆ ಮಾಡಿ ಘಟನೆ ಸಂಬಂಧ ತನಿಖೆ ಮುಂದುವರಿಸಿದ್ದಾರೆ.

Edited By : Shivu K
PublicNext

PublicNext

20/06/2026 07:09 pm

Cinque Terre

2.55 K

Cinque Terre

1

ಸಂಬಂಧಿತ ಸುದ್ದಿ