ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಕಳಪೆ ರಸ್ತೆ ಕಾಮಗಾರಿ - ಸಂಪಂಗಿರಾಮನಗರ AE ಪೂಜಾರಪ್ಪ ಅಮಾನತು, ಗುತ್ತಿಗೆ ಕಂಪನಿ ಬ್ಲಾಕ್ ಲಿಸ್ಟ್!

ಬೆಂಗಳೂರು: ರಾಜಧಾನಿಯ ರಸ್ತೆಗಳ ಕಳಪೆ ಕಾಮಗಾರಿ ವಿರುದ್ಧ ಆಡಳಿತ ಯಂತ್ರ ಚಾಟಿ ಬೀಸಿದ್ದು, ಕರ್ತವ್ಯ ಲೋಪ ಎಸಗಿದ ಅಧಿಕಾರಿಯನ್ನು ಅಮಾನತುಗೊಳಿಸಿ, ಗುತ್ತಿಗೆದಾರ ಸಂಸ್ಥೆಯನ್ನು ಕಪ್ಪು ಪಟ್ಟಿಗೆ (Blacklist) ಸೇರಿಸಲಾಗಿದೆ.

ಬೆಂಗಳೂರಿನ ವಾರ್ಡ್ ಸಂಖ್ಯೆ 110ರ ಸಂಪಂಗಿರಾಮನಗರ ವ್ಯಾಪ್ತಿಯಲ್ಲಿ ಇನ್‌ಫ್ರಾಸ್ಟ್ರಕ್ಚರ್ ಪ್ರೋಗ್ರಾಮ್ (Infrastructure Program) ಅಡಿಯಲ್ಲಿ ಮುಖ್ಯ ಮತ್ತು ಉಪ-ಮುಖ್ಯ (Arterial & Sub-Arterial) ರಸ್ತೆಗಳ ಡಾಂಬರೀಕರಣ (Asphalting) ಕಾಮಗಾರಿಯನ್ನು ಕೈಗೊಳ್ಳಲಾಗಿತ್ತು. ಆದರೆ, ಈ ಕಾಮಗಾರಿಯಲ್ಲಿ ವ್ಯಾಪಕ ಕಳಪೆ ನಿರ್ಮಾಣವಾಗಿರುವುದು ತನಿಖೆಯ ವೇಳೆ ಪತ್ತೆಯಾಗಿದೆ. ನಿಗದಿಪಡಿಸಿದ ಕ್ರಿಯಾಯೋಜನೆಯನ್ನು (Action Plan) ಸಂಪೂರ್ಣವಾಗಿ ಗಾಳಿಗೆ ತೂರಿ, ರಸ್ತೆಗೆ ಬಳಸಬೇಕಾದ ಡಾಂಬರಿನ ಸರಿಯಾದ ಪ್ರಮಾಣ (Proportionate) ಮತ್ತು ದಪ್ಪವನ್ನು (Thickness) ಕಾಯ್ದುಕೊಳ್ಳದೆ ತೀವ್ರ ನಿರ್ಲಕ್ಷ್ಯ ವಹಿಸಲಾಗಿತ್ತು.

ಒಬ್ಬ ಜವಾಬ್ದಾರಿಯುತ ಅಧಿಕಾರಿಯಾಗಿ ಗುತ್ತಿಗೆದಾರರ ಜೊತೆ ಶಾಮೀಲಾಗಿ ಸರ್ಕಾರದ ಹಣ ದುರುಪಯೋಗ ಹಾಗೂ ಕರ್ತವ್ಯ ಲೋಪಕ್ಕೆ ಕಾರಣರಾದ ಸಂಪಂಗಿರಾಮನಗರ ವಾರ್ಡ್‌ನ ಸಹಾಯಕ ಅಭಿಯಂತರರಾದ (AE) ಪೂಜಾರಪ್ಪ ಅವರ ವಿರುದ್ಧ ತಕ್ಷಣದಿಂದಲೇ ಜಾರಿಗೆ ಬರುವಂತೆ ಕ್ರಮ ಕೈಗೊಳ್ಳಲಾಗಿದೆ. 1957ರ ಸಿಸಿಎ ನಿಯಮ 10ರ (CCA Rules 1957) ಅಡಿಯಲ್ಲಿ ಇಲಾಖಾ ವಿಚಾರಣೆಯನ್ನು ಕಾಯ್ದಿರಿಸಿ, ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ.

ಇದರ ಜೊತೆಗೆ, ನಿಯಮ ಉಲ್ಲಂಘಿಸಿ ಕಳಪೆ ಕಾಮಗಾರಿ ನಡೆಸಿದ ಗುತ್ತಿಗೆದಾರ ಕಂಪನಿಯನ್ನು ಸಹ ಸರ್ಕಾರ ಕಪ್ಪು ಪಟ್ಟಿಗೆ (Blacklist) ಸೇರಿಸಿ ಕಠಿಣ ಮುನ್ಸೂಚನೆ ನೀಡಿದೆ. ಕಳಪೆ ಕಾಮಗಾರಿ ನಡೆಸುವ ಅಧಿಕಾರಿಗಳು ಮತ್ತು ಗುತ್ತಿಗೆದಾರರಿಗೆ ಈ ಕ್ರಮ ಒಂದು ಎಚ್ಚರಿಕೆಯ ಗಂಟೆಯಾಗಿದೆ.

Edited By : Vijay Kumar
PublicNext

PublicNext

20/06/2026 07:38 pm

Cinque Terre

2.04 K

Cinque Terre

0

ಸಂಬಂಧಿತ ಸುದ್ದಿ