ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಇನ್‌ಸ್ಟಾ ‘ಮಿಲಿಯನ್’ ಕ್ಲಬ್‌ಗೆ ಜಮೀರ್ ಎಂಟ್ರಿ!

ಬೆಂಗಳೂರು: ರಾಜಕೀಯ ವಲಯದಲ್ಲಿ ತಮ್ಮದೇ ಆದ ವಿಭಿನ್ನ ಶೈಲಿ ಮತ್ತು ಮಾಸ್ ಇಮೇಜ್ ಮೂಲಕ ಸದಾ ಸುದ್ದಿಯಲ್ಲಿರುವ ಸಚಿವ ಬಿ.ಝಡ್. ಜಮೀರ್ ಅಹಮದ್ ಖಾನ್, ಇದೀಗ ಸೋಶಿಯಲ್ ಮೀಡಿಯಾದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದ್ದಾರೆ. ಅವರ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯ ಫಾಲೋವರ್ಸ್ ಸಂಖ್ಯೆ ಭರ್ಜರಿ ೧ ಮಿಲಿಯನ್ (10 ಲಕ್ಷ) ಗಡಿಯನ್ನು ದಾಟಿದೆ.

ವಿಶೇಷವೆಂದರೆ, ಕಳೆದ ಹದಿನೈದು ದಿನಗಳಲ್ಲಿಯೇ ಜಮೀರ್ ಅವರ ಖಾತೆಗೆ ಬರೋಬ್ಬರಿ 3 ಲಕ್ಷಕ್ಕೂ ಅಧಿಕ ಹೊಸ ಫಾಲೋವರ್ಸ್ ಸೇರ್ಪಡೆಯಾಗಿದ್ದಾರೆ. ಸಚಿವರ ಜನಪ್ರಿಯತೆ ಡಿಜಿಟಲ್ ಜಗತ್ತಿನಲ್ಲಿ ಎಷ್ಟು ವೇಗವಾಗಿ ಮುನ್ನುಗ್ಗುತ್ತಿದೆ ಎಂಬುದಕ್ಕೆ ಈ ದಿಢೀರ್ ಬೆಳವಣಿಗೆಯೇ ಸಾಕ್ಷಿ.

ತಮ್ಮ ದೈನಂದಿನ ರಾಜಕೀಯ ಚಟುವಟಿಕೆಗಳು, ಸಾರ್ವಜನಿಕ ಕಾರ್ಯಕ್ರಮಗಳು ಹಾಗೂ ಅಭಿಮಾನಿಗಳ ಜೊತೆಗಿನ ಒಡನಾಟದ ವಿಡಿಯೋಗಳ ಮೂಲಕ ಜಮೀರ್ ಅಹಮದ್ ಇನ್‌ಸ್ಟಾಗ್ರಾಮ್‌ನಲ್ಲಿ ಸಖತ್ ಆಕ್ಟಿವ್ ಆಗಿದ್ದು, ಯುವ ಪೀಳಿಗೆಯನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಮಿಲಿಯನ್ ಕ್ಲಬ್ ಸೇರಿದ ಸಚಿವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ಮತ್ತು ಬೆಂಬಲಿಗರು ಶುಭಾಶಯಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ.

Edited By : Shivu K
PublicNext

PublicNext

19/06/2026 10:22 pm

Cinque Terre

6.17 K

Cinque Terre

0

ಸಂಬಂಧಿತ ಸುದ್ದಿ