ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಬಿಡದಿ ಟೌನ್ ಶಿಪ್ ವಿಚಾರ ಪ್ರತಿಭಟನೆ ಎಚ್ಚರಿಕೆ ಕೊಟ್ಟ ಕರವೇ ಸಿಂಹ ಸೈನ್ಯ

ಬೆಂಗಳೂರು: ಬಿಡದಿ ಟೌನ್ ಶಿಪ್ ವಿಚಾರವಾಗಿ ಕರವೇ ಸಿಂಹ ಸೈನ್ಯ ಪ್ರತಿಭಟನೆ ಎಚ್ಚರಿಕೆ ಕೊಟ್ಟಿದೆ. ೧೦ ಸಾವಿರ ಪೊರಕೆ ಮತ್ತು ಒನಕೆ ಪ್ರತಿಭಟನೆಗೆ ಕರವೇ ಸಿಂಹ ಸೈನ್ಯ ಮುಂದಾಗಿದೆ.

ಕರ್ನಾಟಕ ರಕ್ಷಣಾ ವೇದಿಕೆ ಸಿಂಹ ಸೈನ್ಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಜಿ. ಎನ್ ಶ್ರೀನಿವಾಸ್ ಗೌಡ ನೇತೃತ್ವದಲ್ಲಿ ಬಿಡದಿ ಟೌನ್ ಶಿಪ್ ಕೈಗೆತ್ತಿಕೊಂಡರೆ ಪೊರಕೆ ಏಟು ಗ್ಯಾರಂಟಿ ಎಂದು ಎಚ್ಚರಿಕೆ ಕೊಟ್ಟಿದ್ದಾರೆ.

ಬಿಡದಿ ಟೌನ್ ಶಿಪ್ ಎಂದು ಬರುವವರಿಗೆ ಇದೇ ಪೊರಕೆ ಒನಕೆಗಳಿಂದ ಒಡೆದು ಕಳಿಸುತ್ತೇವೆ. ರೈತರ ಮರಣ ಶಾಸನ ಬರೆಯಲು ಮುಂದಾಗಿರುವ ಬಿಡದಿ ಟೌನ್ ಶಿಪ್ ಕೈಬಿಡಬೇಕು. ರೈತರು ದೇಶದ ಬೆನ್ನೆಲುಬು ಅಂತಾರೆ , ಯಾವ ಸಂಭ್ರಮಕ್ಕೆ.? ರೈತರ ಹೊಟ್ಟೆ ಮೇಲೆ ಹೊಡೆಯುವ ಕೆಲಸ ರಾಜ್ಯ ಸರ್ಕಾರ ಮಾಡುತ್ತಿದೆ.

ಎಕರೆಗೆ 2ಕೋಟಿ ಅಫರ್ ಮಾಡಿದ್ದಾರೆ , ದುಡ್ಡು ಇದ್ರೆ ನಿಮ್ಮ ಮನೆಯಲ್ಲೇ ಇಟ್ಟುಕೊಳ್ಳಿ . ಟೌನ್ ಶಿಪ್ ಮಾಡುವುದೇ ಆದರೆ ಉತ್ತರ ಕರ್ನಾಟಕ ಕಡೆ ಮಾಡಿ. ಅಲ್ಲಿನ ಜನರಿಗೆ , ರೈತರಿಗೆ ಸಹಕಾರ ಹಾಗುತ್ತೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Edited By :
PublicNext

PublicNext

19/06/2026 05:41 pm

Cinque Terre

5.07 K

Cinque Terre

0

ಸಂಬಂಧಿತ ಸುದ್ದಿ