ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗುಂಡ್ಲುಪೇಟೆ: ಹಿಂಬದಿಗೆ ವಾಲಿ ನಿಂತ ಅಧಿಕ ಭಾರದ ನೀಲಗಿರಿ ಮರ ಸಾಗಿಸುತ್ತಿದ್ದ ಲಾರಿ; ತಪ್ಪಿದ ದುರಂತ

ಗುಂಡ್ಲುಪೇಟೆ: ತಮಿಳುನಾಡಿನಿಂದ ನೀಲಗಿರಿ ಮರಗಳನ್ನ ಹೊತ್ತು ಬರುತ್ತಿದ್ದ ಲಾರಿಯೊಂದು ಬಂಡೀಪುರದ ಮೇಲ್ಮುಖ ರಸ್ತೆಯಲ್ಲಿ ಹಿಂಬದಿಗೆ ವಾಲಿ ನಿಂತ ಘಟನೆ ಸಂಭವಿಸಿದೆ.

ಅಧಿಕ ಭಾರದ ಅಸಮತೋಲನದಿಂದಾಗಿ ದೊಡ್ಡ ಗಾತ್ರದ ಮರಗಳು ಹಿಮ್ಮುಖವಾಗಿ ಜಾರಿದ ಹಿನ್ನೆಲೆಯಲ್ಲಿ ನಿಯಂತ್ರಣಕ್ಕೆ ಬಾರದ ಕಾರಣ ಪೂರ್ತಿಯಾಗಿ ಹಿಂಬದಿಗೆ ವಾಲಿ ನಿಂತಿದ್ದು ಭಾರಿ ಅನಾಹುತ ತಪ್ಪಿದಂತಾಗಿದೆ.

ಸಾಮರ್ಥ್ಯಕ್ಕಿಂತ ಅಧಿಕ ಮರದ ದಿಮ್ಮಿಗಳನ್ನ ತುಂಬಿರುವುದೇ ಇಂತಹ ಘಟನೆಗಳಿಗೆ ಕಾರಣ ಎನ್ನಲಾಗುತ್ತಿದೆ. ಒಂದೇ ಬಾರಿಗೆ ಮರಗಳನ್ನು ಸಾಗಿಸುವ ದುಸ್ಸಾಹಸಕ್ಕೆ ಮುಂದಾಗುವ ಚಾಲಕರ ನಡೆಯಿಂದ ಹಿಂಬದಿ ವಾಹನ ಸವಾರರ ಪ್ರಾಣಕ್ಕೆ ಸಂಚಕಾರ ತಂದೊಡ್ಡುವ ಸಂಭವ ಹೆಚ್ಚಿರುತ್ತದೆ. ಭಾರ ಹೊತ್ತ ಲಾರಿಗಳು ಹಿಮ್ಮುಖವಾಗಿ ಚಾಲಿತಗೊಂಡರೆ ಬ್ರೇಕ್ ಹಾಕಿ ನಿಯಂತ್ರಿಸಲು ಅಸಾಧ್ಯ. ಸುತ್ತಲೂ ಟಾರ್ಪಾಲ್ ಹೊದಿಸುವುದರಿಂದ ಪಾರ್ಕಿಂಗ್ ಲೈಟ್ ಹಾಕಿದರೂ ಸಹ ಹಿಂಬದಿ ಸವಾರರಿಗೆ ಕಾಣುವುದಿಲ್ಲ. ಹಾಗಾಗಿ ಸಂಚಾರ ಅಸ್ತವ್ಯಸ್ತ, ಅಪಘಾತದ ಸಂಭವ ಹೆಚ್ಜಿರುತ್ತದೆ ಎಂದು ನುರಿತ ಚಾಲಕರೊಬ್ಬರು ಮಾಹಿತಿ ನೀಡಿದ್ದಾರೆ.

ಸದ್ಯ ಮರದ ದಿಮ್ಮಿಗಳನ್ನು ಮತ್ತೊಂದು ಲಾರಿಗೆ ಶಿಫ್ಟ್ ಮಾಡುವ ಮೂಲಕ ಸಮತೋಲಿತ ಭಾರದೊಂದಿಗೆ ರಸ್ತೆ ಬದಿಯಲ್ಲಿ ಎಡೆಯೆತ್ತಿ ನಿಂತಿದ್ದ ಲಾರಿಯನ್ನು ತೆರವುಗೊಳಿಸಲಾಗಿದೆ.

Edited By : Vinayak Patil
PublicNext

PublicNext

12/06/2026 10:20 pm

Cinque Terre

13.4 K

Cinque Terre

0

ಸಂಬಂಧಿತ ಸುದ್ದಿ