ಗುಂಡ್ಲುಪೇಟೆ : ತಾಲೂಕಿನಲ್ಲಿ ಶನಿವಾರ ಸಂಭವಿಸಿದ ಪ್ರತ್ಯೇಕ ಮೂರು ಅಪಘಾತ ಪ್ರಕರಣದಲ್ಲಿ ಓರ್ವ ಧಾರುಣವಾಗಿ ಸಾವನ್ನಪ್ಪಿದ್ದು ಇನ್ನೊಂದೆಡೆ ದಂಪತಿ ಸೇರಿದಂತೆ ಓರ್ವ ಯುವಕ ತೀವ್ರತರವಾದ ಪೆಟ್ಟಿಗೊಳಗಾಗಿ ಆಸ್ಪತ್ರೆಗೆ ದಾಖಲಾದ ಘಟನೆ ಜರುಗಿದೆ.
ತಾಲೂಕಿನ ದೊಡ್ಡತುಪ್ಪೂರು ಸಮೀಪ ಟಾಟಾ ಏಸ್ ಹಾಗೂ ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ಕೆಲಸೂರು ಗ್ರಾಮದ ನಂಜನಾಯಕ ಎಂಬವರು ಸ್ಥಳದಲ್ಲಿಯೇ ಮೃತಪಟ್ಟರೆ ಕೆಲಸದ ನಿಮಿತ್ತ ಪಟ್ಟಣಕ್ಕೆ ಬಂದಿದ್ದ ಬೆಂಡ್ಗಳ್ಳಿ ಗ್ರಾಮದ ದಂಪತಿಗಳಿಬ್ಬರೂ ಊರಿಗೆ ವಾಪಾಸ್ಸಾಗುತ್ತಿದ್ದ ವೇಳೆ ಗ್ರಾಮದ ಪ್ರವೇಶ ದ್ವಾರದ ಬಳಿ ವೇಗವಾಗಿ ಬಂದಂತಹ ಬೈಕ್ ಸವಾರ ಗುದ್ದಿದ ಪರಿಣಾಮ ಅದೇ ಗ್ರಾಮದ ಶ್ರೀನಿವಾಸ್ ಹಾಗೂ ರಾಜಮ್ಮ ಎಂಬವರಿಗೆ ಗಂಭೀರ ಪೆಟ್ಟಾಗಿದ್ದು ಕೈ, ಕಾಲು ಮುರಿತಗೊಂಡಿದೆ ಎನ್ನಲಾಗಿದ್ದು ಮೈಸೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ, ಇತ್ತ ಕೊಳ್ಳೇಗಾಲ ಮೂಲದ ಓರ್ವನನ್ನ ಚಿಕಿತ್ಸೆಗೆ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬಸ್ - ಲಾರಿ ಮುಖಾಮುಖಿ ಡಿಕ್ಕಿ : ಲಾರಿ ಹಾಗೂ ಕೆ ಎಸ್ ಆರ್ಟಿಸಿ ಬಸ್ ಮುಖಾಮುಖಿ ಡಿಕ್ಕಿಯಾದ ಹಿನ್ನೆಲೆ ಬಸ್ಸಿನ ಚಾಲಕ ಹಾಗೂ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿರುವ ಘಟನೆಯೂ ಸಹ ಬೆಂಡ್ಗಳ್ಳಿ ಗೇಟ್ ಬಳಿಯೇ ಜರುಗಿದೆ. ಪಟ್ಟಣದಿಂದ ಮೈಸೂರಿಗೆ ತೆರಳುತ್ತಿದ್ದ ಕೆ ಎಸ್ ಆರ್ಟಿಸಿ ಬಸ್ಸಿಗೆ ಮೈಸೂರು ಮಾರ್ಗವಾಗಿ ಬಂದಂತಹ ತಮಿಳುನಾಡು ಮೂಲದ ಲಾರಿ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಚಾಲಕರಿಬ್ಬರಿಗೂ ಪೆಟ್ಟಾಗಿದ್ದು ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಮಗುವಿಗೆ ಗಾಯಗಳಾಗಿವೆ , ಡಿಕ್ಕಿಯೊಡೆದ ತೀವ್ರತೆಗೆ ಲಾರಿ ಹಾಗೂ ಬಸ್ಸಿನ ಮುಂಭಾಗ ಸಂಪೂರ್ಣವಾಗಿ ಜಖಂಗೊಂಡಿದೆ, ಅದೃಷ್ಟವಶಾತ್ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಯಾಣಿಕರು ಪಾರಾಗಿದ್ದಾರೆ. ಪ್ರತ್ಯೇಕ ಘಟನೆಗಳ ಕುರಿತು ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಿವಕುಮಾರ್ ಪಬ್ಲಿಕ್ ನೆಕ್ಸ್ಟ್ *ಗುಂಡ್ಲುಪೇಟೆ
Kshetra Samachara
13/06/2026 09:47 pm