ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಕಲೇಶಪುರ: ಅರಣ್ಯ ಭೂಮಿ ಒತ್ತುವರಿ ತೆರವು -: ಒತ್ತುವರಿದಾರರಿಂದಲೇ ಸಸಿ ನೆಡಿಸಿದ ಅರಣ್ಯ ಇಲಾಖೆ

ಸಕಲೇಶಪುರ: ಸಕಲೇಶಪುರ ವಲಯ ಅರಣ್ಯಾಧಿಕಾರಿಗಳು ಹಾಗೂ ಸಿಬ್ಬಂದಿಗಳು ಮಾರನಹಳ್ಳಿ ಶಾಖೆಯ ಕೆಂಪುಹೊಳೆ ಮೀಸಲು ಅರಣ್ಯ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ-75ರ ಪಕ್ಕದಲ್ಲಿರುವ ಮೀಸಲು ಅರಣ್ಯ ಪ್ರದೇಶಕ್ಕೆ ಭೇಟಿ ನೀಡಿ ಅರಣ್ಯ ಭೂಮಿ ಒತ್ತುವರಿಯನ್ನು ತೆರವುಗೊಳಿಸಿದರು.

ಸರ್ವೆ ನಂ. 401ರಲ್ಲಿ ಹೋಟೆಲ್ ಮಾಲೀಕ ಗಿರೀಶ್ ಅವರು ಮಣ್ಣು ತುಂಬಿಸಿ ಸುಮಾರು 5 ಗುಂಟೆ ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿರುವುದು ಪತ್ತೆಯಾಯಿತು. ಸ್ಥಳಕ್ಕೆ ಕರೆಸಿದ ಅಧಿಕಾರಿಗಳು ಅವರಿಗೆ ಅರಣ್ಯ ಕಾನೂನು ಹಾಗೂ ನಿಯಮಗಳ ಕುರಿತು ಮಾಹಿತಿ ನೀಡಿ ಮನವರಿಕೆ ಮಾಡಿಕೊಟ್ಟರು.

ಬಳಿಕ ಹಸಿರು ಹಾಸನ ಅಭಿಯಾನದಡಿ ಒತ್ತುವರಿ ಮಾಡಿಕೊಂಡಿದ್ದ ಜಾಗದಲ್ಲೇ ಗಿರೀಶ್ ಅವರಿಂದ ವಿವಿಧ ಜಾತಿಯ ಸಸಿಗಳನ್ನು ನೆಡಿಸುವ ಮೂಲಕ ಒತ್ತುವರಿಯನ್ನು ತೆರವುಗೊಳಿಸಲಾಯಿತು.

ಮಳೆಗಾಲದ ಸಂದರ್ಭದಲ್ಲಿ ಅರಣ್ಯ ಭೂಮಿ ಒತ್ತುವರಿ ಪ್ರಕರಣಗಳು ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಸಿಬ್ಬಂದಿಗಳು ಹೆಚ್ಚಿನ ಎಚ್ಚರಿಕೆಯಿಂದ ಗಸ್ತು ತಿರುಗುವಂತೆ ಅರಣ್ಯಾಧಿಕಾರಿಗಳು ಸೂಚನೆ ನೀಡಿದರು.

Edited By : Vijay Kumar
PublicNext

PublicNext

13/06/2026 01:07 pm

Cinque Terre

5.33 K

Cinque Terre

0

ಸಂಬಂಧಿತ ಸುದ್ದಿ