ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಮತ್ತೆ ಕೆತ್ತಿಕಲ್ಲು ಗುಡ್ಡ ಕುಸಿತ- ಆತಂಕದಲ್ಲಿ ವಾಹನ ಸವಾರರು

ಮಂಗಳೂರು: ನಗರದ ಹೊರವಲಯದ ವಾಮಂಜೂರು ಸಮೀಪದ ರಾಷ್ಟ್ರೀಯ ಹೆದ್ದಾರಿ ಬಳಿಯ ಕೆತ್ತಿಕಲ್ಲು ಗುಡ್ಡವು ಈ ಮಳೆಗೆ ಮತ್ತೆ ಕುಸಿದಿದೆ.

ಮಂಗಳೂರು- ಮೂಡುಬಿದಿರೆ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ ಅಗಲೀಕರಣಕ್ಕೆ ಅವೈಜ್ಞಾನಿಕವಾಗಿ ಗುಡ್ಡವನ್ನು ಅಗೆಯಲಾಗಿತ್ತು. ಈ ಹಿನ್ನೆಲೆಯಲ್ಲಿ ಕಳೆದ ಮೂರು ನಾಲ್ಕು ವರ್ಷಗಳಿಂದ ಈ ಗುಡ್ಡವು ಮಳೆಗಾಲಕ್ಕೆ ಪದೇ ಪದೇ ಕುಸಿಯುತ್ತಿದೆ. ಕಳೆದ ಬಾರಿ ಗುಡ್ಡಕ್ಕೆ ಸಿಮೆಂಟ್ ಮಿಶ್ರಣ ಸ್ಪ್ರೇ ಮಾಡಲಾಗಿತ್ತು. ಆದರೆ ಈ ಬಾರಿ ಮತ್ತೆ ಗುಡ್ಡ ಕುಸಿತವಾಗಿ ಸಿಮೆಂಟ್ ಮಿಶ್ರಣ ಸಂಪೂರ್ಣ ಹಾನಿಯಾಗಿ ಮಣ್ಣು ಕುಸಿದು ರಸ್ತೆಗೆ ಬಿದ್ದಿದೆ.

ಸದ್ಯ ಮಣ್ಣು ತೆರವು ಕಾರ್ಯ ನಡೆಯುತ್ತಿದೆ. ಒಂದು ಬದಿ ವಾಹನ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ. ಆದರೆ ಸರಿಯಾದ ಮಳೆ ಇನ್ನೂ ಸುರಿದಿಲ್ಲ. ಮುಂದಿನ ಮಳೆಗೆ ಮತ್ತೆ ಗುಡ್ಡ ಕುಸಿಯುವ ಸಂಭವವಿದ್ದು, ವಾಹನ ಸವಾರರು ಆತಂಕದಲ್ಲಿ ಸಂಚರಿಸುವಂತಾಗಿದೆ.

Edited By : Somashekar
PublicNext

PublicNext

13/06/2026 01:26 pm

Cinque Terre

10.6 K

Cinque Terre

0

ಸಂಬಂಧಿತ ಸುದ್ದಿ