ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬ್ರಹ್ಮಾವರ: ತೆಂಗಿನಕಾಯಿ ಬಿದ್ದು ಮೃತ ಮಗುವಿನ ಮನೆಗೆ ಮಾಜಿ ಸಂಸದ ಹೆಗ್ಡೆ ಬೇಟಿ ಸಾಂತ್ವನ

ಬ್ರಹ್ಮಾವರ: ಬ್ರಹ್ಮಾವರ ಬಳಿಯ ಹೆರಂಜೆಯಲ್ಲಿ ತಾಯಿ ಜೊತೆ ಇರುವಾಗಲೇ ಆಕಸ್ಮಿಕವಾಗಿ ತೆಂಗಿನಕಾಯಿ ತಲೆಗೆ ಬಿದ್ದು ದುರ್ಮರಣ ಹೊಂದಿದ ಒಂದುವರೆ ವರ್ಷದ ದಕ್ಷ್ ಪೂಜಾರಿಯ ಮನೆಗೆ ಭಾನುವಾರ ಮಾಜಿ ಸಂಸದ ಕೆ.ಜಯಪ್ರಕಾಶ್ ಹೆಗ್ಡೆ ಭಾನುವಾರ ಬೇಟಿ ನೀಡಿ ಮಗುವಿನ ತಂದೆ ಪ್ರಶಾಂತ್ ಪೂಜಾರಿ ಮತ್ತು ಮನೆಯವರೀಗೆ ಸಾಂತ್ವನ ಹೇಳಿದರು.

ಅಲ್ಲಿನ ಕೆಲವು ಮನೆಗಳ ಮಕ್ಕಳು ಶಾಲೆಗೆ ಹೋಗಲು ಸರಿಯಾದ ದಾರಿ ಇಲ್ಲದೆ ನಡೆದುಕೊಂಡೆ ಹೋಗುವ ಸಮಸ್ಯೆ ಕುರಿತು ಅಲ್ಲಿನ ಖಾಸಗಿ ಜಾಗದವರೊಂದಿಗೆ ಮಾತು ಕತೆ ನಡೆಸಿ ಮನವೊಲಿಸಿ ಉಡುಪಿ ಜಿಲ್ಲಾಧಿಕಾರಿಯವರೊಂದಿಗೆ ರಸ್ತೆ ನಿರ್ಮಾಣದ ಕುರಿತು ಹೆಗ್ಡೆಯವರು ಸ್ಥಳದಲ್ಲಿಯೇ ಮಾತು ಕತೆ ನಡೆಸಿ ದಾರಿಮಾಡಿ ಸಂಚಾರಕ್ಕೆ ಅನುವು ಮಾಡಲು ಪ್ರಯತ್ನ ಮಾಡುವುದಾಗಿ ಹೇಳಿದರು.

ಅಂದು ಕೂಡಾ ಮೃತಬಾಲಕ ದಕ್ಷ್ ಪೂಜಾರಿಯತಾಯಿ ಸುಚಿತ್ರ ಪೂಜಾರಿ ದೊಡ್ಡ ಮಗಳು ದಿಯಾ ಳನ್ನು ಬ್ರಹ್ಮಾವರದಲ್ಲಿ 1 ನೇ ತರಗತಿಯಲ್ಲಿ ಶಿಕ್ಷಣಪಡೆಯುತ್ತಿರುವವಳಿಗೆ ವಾಹನಕ್ಕೆ ಕಳಿಸಲು ಮಗುವಿನೊಂದಿಗೆಕಾಲುದಾರಿಯಲ್ಲಿ ನಡೆದುಕೊಂಡು ಹೋಗುವಾಗ ತೆಂಗಿನಮರದಿಂದ ಕಾಯಿ ಮಗುವಿನ ತಲೆಗೆ ಬಿದ್ದು ದುರ್ಘಟನೆ ಸಂಭವಿಸಿತ್ತು.

ನಾನಾ ಪ್ರಮುಖರಾದ ಕುಮಾರ್ ಬೈಕಾಡಿ, ದೀಪು ಚಾಂತಾರು ಸ್ಥಳಿಯರಾದ ಕಿಶೋರ್ ಹೆಗ್ಡೆ, ವಿನಯ ಸುವರ್ಣ ಹೆರಂಜೆ, ಬಾಲಕೃಷ್ಣ ಪೂಜಾರಿ ಚಾಂತಾರು, ಸಂದೀಪ್ ಪೂಜಾರಿ ಚಾಂತಾರು, ವಿಶ್ವನಾಥ್ ಶೆಟ್ಟಿ ಹೆರಂಜೆ, ಪ್ರಭಾಕರ ಶೆಟ್ಟಿ ಹೆರಂಜೆ ಇನ್ನಿತರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

14/06/2026 10:04 pm

Cinque Terre

1.46 K

Cinque Terre

0

ಸಂಬಂಧಿತ ಸುದ್ದಿ