ಬೆಂಗಳೂರು: ಕರ್ನಾಟಕ ರಾಜ್ಯ ವಕೀಲರ ಪರಿಷತ್ ಸದಸ್ಯರಾಗಿ ಸಿ.ಎಂ.ಧನಂಜಯ ಅವರು ಆಯ್ಕೆ ಆಗಿದ್ದಾರೆ. ವಕೀಲರ ಪರಿಷತ್ ನ 23 ಸ್ಥಾನಗಳಿಗೆ ಮಾರ್ಚ್ 11 ರಂದು ಚುನಾವಣೆ ನಡೆದಿತ್ತು. ಪ್ರಾಶಸ್ತ್ಯವಾರು ಮತಗಳ ಎಣಿಕೆ ನಡೆದಿತ್ತು. ಸಿ.ಎಂ.ಧನಂಜಯ ಅವರು ಶನಿವಾರ ವಿಜಯ ಸಾಧಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ವಕೀಲರ ಪರಿಷತ್ ಇತಿಹಾಸದಲ್ಲಿ ಮೊದಲ ಪ್ರಯತ್ನದಲ್ಲೇ ಗೆಲುವು ಸಾಧಿಸುವ ಮೂಲಕ ಧನಂಜಯ ಅವರು ಇತಿಹಾಸ ಸೃಷ್ಟಿಸಿದ್ದಾರೆ.
ಒಟ್ಟು 23 ಸದಸ್ಯರು ವಕೀಲರ ಪರಿಷತ್ ಗೆ ಆಯ್ಕೆಯಾಗುತ್ತಿದ್ದು, ಸಿ.ಎಂ.ಧನಂಜಯ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಕಾನೂನು, ಮಾನವ ಹಕ್ಕುಗಳು ಮತ್ತು ಮಾಹಿತಿ ಹಕ್ಕು ವಿಭಾಗದ ಹಾಲಿ ಅಧ್ಯಕ್ಷರಾಗಿದ್ದಾರೆ.
PublicNext
13/06/2026 07:40 pm
LOADING...