ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರೈಲು ಹತ್ತದಂತೆ ತಡೆದು ಉದ್ಧಟತೋರಿದ ವ್ಯಕ್ತಿ: ಖಾಕಿಗೂ ವಾರ್ನಿಂಗ್‌ಗೂ ಡೋಂಟ್‌ ಕೇರ್‌

ಭಾರತದ ರೈಲ್ವೆ ನಿಲ್ದಾಣವೊಂದರಲ್ಲಿ ವ್ಯಕ್ತಿಯೊಬ್ಬ ಸಹಪ್ರಯಾಣಿಕರು ರೈಲು ಹತ್ತದಂತೆ ತಡೆದು ಉದ್ಧಟತನ ಪ್ರದರ್ಶಿಸಿರುವ ಘಟನೆ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ವಿಡಿಯೋ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಬನಿಯನ್ ಮಾತ್ರ ಧರಿಸಿದ್ದ ಆ ವ್ಯಕ್ತಿ, ರೈಲು ಕೋಚ್‌ನ ಬಾಗಿಲಲ್ಲೇ ಗಟ್ಟಿಯಾಗಿ ನಿಂತು ಇತರ ಪ್ರಯಾಣಿಕರು ಒಳಗೆ ಪ್ರವೇಶಿಸದಂತೆ ತಡೆಯುತ್ತಿದ್ದ. ಪ್ರಯಾಣಿಕರು ಎಷ್ಟೇ ಪ್ರತಿಭಟಿಸಿದರೂ ಆತ ತನ್ನ ಜಾಗದಿಂದ ಕದಲದೇ ದರ್ಪ ಮೆರೆದಿದ್ದಾನೆ.

ಘಟನಾ ಸ್ಥಳಕ್ಕೆ ಬಂದ ರೈಲ್ವೆ ಪೊಲೀಸರು (RPF) ಬಾಗಿಲು ಹಾಕದಂತೆ ವ್ಯಕ್ತಿಗೆ ತಿಳಿಸಿದರು. ಇದಕ್ಕೆ ಒಪ್ಪದ ಆ ವ್ಯಕ್ತಿ ಬೇರೆ ಕೋಚ್‌ಗಳು ಖಾಲಿ ಇವೆ ಅಲ್ಲಿಗೆ ಹೋಗಲು ಪ್ರಯಾಣಿಕರಿಗೆ ಹೇಳಿ ಎಂದು ಬಾಗಿಲು ಹಾಕುತ್ತಾನೆ. ಆಗ ರೈಲ್ವೆ ಪೊಲೀಸ್, ಮೊಬೈಲ್‌ನಲ್ಲಿ ವಿಡಿಯೋ ರೆಕಾರ್ಡ್ ಮಾಡಿಕೊಳ್ಳುತ್ತಾ ಆತನ ಗುರುತಿನ ಚೀಟಿ (ID) ಕೇಳುತ್ತಾರೆ. ಆಗ ವಾಗ್ವಾದ ಜೋರಾಗುತ್ತದೆ. ಪೊಲೀಸರು ಎಷ್ಟೇ ತಿಳುವಳಿಕೆ ಹೇಳಲು ಹೋದರು ಆ ಪ್ರಯಾಣಿಕ ಮಾತ್ರ ಅವಾಜ್ ಹಾಕುತ್ತಲೇ ಇದ್ದ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ರೌಡಿಯಂತೆ ವರ್ತಿಸಿದ ಪ್ರಯಾಣಿಕ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ನೆಟ್ಟಿಗರು ಆಗ್ರಹಿಸಿದ್ದಾರೆ.

ಇನ್ನೂ ಕೆಲ ನೆಟ್ಟಿಗರು ಸಾರ್ವಜನಿಕರು ರೈಲ್ವೆ ಪೊಲೀಸರ ನಡೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. "ಸಾರ್ವಜನಿಕರಿಗೆ ತೊಂದರೆ ಕೊಡುತ್ತಿದ್ದ ಕಿಡಿಗೇಡಿಯನ್ನು ಪೊಲೀಸರು ತಕ್ಷಣವೇ ಎಳೆದೊಯ್ಯಬೇಕಿತ್ತು, ಅದನ್ನು ಬಿಟ್ಟು ವಿಡಿಯೋ ಮಾಡುತ್ತಾ ನಿಂತಿದ್ದೇಕೆ?" ಎಂದು ಹಲವರು ಪ್ರಶ್ನಿಸಿದ್ದಾರೆ. ಅಷ್ಟೇ ಅಲ್ಲದೆ, ಇತ್ತೀಚಿನ ದಿನಗಳಲ್ಲಿ ಭಾರತೀಯ ರೈಲ್ವೆಯಲ್ಲಿ ಹೆಚ್ಚಾಗುತ್ತಿರುವ ಇಂತಹ ಶಿಸ್ತುಬದ್ಧವಲ್ಲದ ಘಟನೆಗಳು ಮತ್ತು ಅಧಿಕಾರಿಗಳ ನಿರ್ಲಕ್ಷ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.

Edited By : Vijay Kumar
PublicNext

PublicNext

13/06/2026 07:47 pm

Cinque Terre

30.96 K

Cinque Terre

1

ಸಂಬಂಧಿತ ಸುದ್ದಿ