ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಿನಿಮೀಯ ಶೈಲಿಯಲ್ಲಿ ಚಿನ್ನದ ಅಂಗಡಿ ಲೂಟಿಗೆ ಯತ್ನಿಸಿದ ಇಬ್ಬರು ಯುವತಿಯರು.!

ಪಾಟ್ನಾ: ಬಿಹಾರದ ಪಾಟ್ನಾದಲ್ಲಿ ಸಿನಿಮೀಯ ಶೈಲಿಯ ದರೋಡೆ ಯತ್ನವೊಂದು ನಡೆದಿದೆ. ಪಾಟ್ನಾದ ದಿಘಾ ಪ್ರದೇಶದಲ್ಲಿರುವ 'ಮಾ ವೈಷ್ಣೋ ಜ್ಯುವೆಲರ್ಸ್' ಎಂಬ ಚಿನ್ನದ ಅಂಗಡಿಗೆ ನುಗ್ಗಿದ ಇಬ್ಬರು ಯುವತಿಯರು, ಚಿನ್ನಾಭರಣ ಲೂಟಿ ಮಾಡಲು ಯತ್ನಿಸಿ ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದಿದ್ದಾರೆ. ಅಂಗಡಿ ಮಾಲೀಕನ ಸಮಯಪ್ರಜ್ಞೆಯಿಂದಾಗಿ ದೊಡ್ಡ ಅನಾಹುತವೊಂದು ತಪ್ಪಿದಂತಾಗಿದೆ.

ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ, ಮುಖಕ್ಕೆ ಮಾಸ್ಕ್ ಧರಿಸಿದ್ದ ಇಬ್ಬರು ಯುವತಿಯರು ಗ್ರಾಹಕರಂತೆ ಜ್ಯುವೆಲರಿ ಅಂಗಡಿಯೊಳಗೆ ಪ್ರವೇಶಿಸಿದ್ದಾರೆ. ಒಮ್ಮೆಲೇ ಅವರು ಅಂಗಡಿ ಮಾಲೀಕನ ಕಣ್ಣಿಗೆ ಪೆಪ್ಪರ್ ಸ್ಪ್ರೇ (ಮೆಣಸಿನಕಾಯಿ ಪುಡಿ ಸ್ಪ್ರೇ) ಮಾಡಲು ಯತ್ನಿಸಿದ್ದಾರೆ. ಆದರೆ, ತಕ್ಷಣವೇ ಎಚ್ಚೆತ್ತ ಮಾಲೀಕ, ಸ್ಪ್ರೇಯಿಂದ ತಪ್ಪಿಸಿಕೊಂಡು ಚಾಣಾಕ್ಷತನದಿಂದ ಅಂಗಡಿಯ ಶಟರ್ ಅನ್ನು ಎಳೆದು ಲಾಕ್ ಮಾಡಿದ್ದಾರೆ. ಅಷ್ಟೇ ಅಲ್ಲದೆ, ಜೋರಾಗಿ ಕೂಗಾಡಿ ಅಕ್ಕಪಕ್ಕದವರನ್ನು ಕರೆದಿದ್ದಾರೆ. ಮಾಲೀಕನ ಕಿರುಚಾಟ ಕೇಳಿ ಓಡಿಬಂದ ಸ್ಥಳೀಯ ವ್ಯಾಪಾರಿಗಳು ಹಾಗೂ ಸಾರ್ವಜನಿಕರು ಸ್ಥಳದಲ್ಲೇ ಇಬ್ಬರು ಯುವತಿಯರನ್ನು ಹಿಡಿದು ಅವರ ಮುಖವಾಡ ಕಳಚಿದ್ದಾರೆ. ಮಾಲೀಕನ ಸಮಯಪ್ರಜ್ಞೆ ಮತ್ತು ಚಾಣಾಕ್ಷತನದಿಂದಾಗಿ ಲೂಟಿ ಯತ್ನ ಸಂಪೂರ್ಣವಾಗಿ ವಿಫಲವಾಗಿದ್ದು, ಅಂಗಡಿಯಿಂದ ಯಾವುದೇ ಚಿನ್ನಾಭರಣ ಕಳ್ಳತನವಾಗಿಲ್ಲ.

ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಇಬ್ಬರು ಯುವತಿಯರನ್ನು ವಶಕ್ಕೆ ಪಡೆದಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ, ಇವರಿಬ್ಬರು ಸ್ಥಳೀಯ ಬಿ.ಎನ್. ಕಾಲೇಜಿನ ಬಿ.ಕಾಂ ವಿದ್ಯಾರ್ಥಿನಿಯರು ಎಂದು ಗುರುತಿಸಲಾಗಿದೆ. ಹವ್ಯಾಸಿಗಳಂತೆ ನಡೆಸಿದ ಈ ಕಳ್ಳತನದ ಯತ್ನ, ಹಾಗೂ ಸ್ಥಳೀಯರ ಒಗ್ಗಟ್ಟು ಮತ್ತು ಅಂಗಡಿ ಮಾಲೀಕನ ಸಮಯಪ್ರಜ್ಞೆ ಈಗ ರಾಜ್ಯಾದ್ಯಂತ ಭಾರಿ ಚರ್ಚೆಗೆ ಕಾರಣವಾಗಿದೆ.

Edited By : Vijay Kumar
PublicNext

PublicNext

13/06/2026 09:19 pm

Cinque Terre

8.85 K

Cinque Terre

1

ಸಂಬಂಧಿತ ಸುದ್ದಿ