ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

​ಹೋಟೆಲ್‌ನಲ್ಲಿ ಊಟ ಮಾಡಿ ಬಿಲ್ ಕೊಡದೇ ಎಸ್ಕೇಪ್ ಆದ ಕುಟುಂಬ; ವಿಡಿಯೋ ವೈರಲ್

​ಮೆಕ್ಸಿಕೋ: ಹೋಟೆಲ್‌ಗೆ ಬಂದು ಹೊಟ್ಟೆ ತುಂಬಾ ಉಂಡು, ಬಿಲ್ ಪಾವತಿಸದೆಯೇ ಇಡೀ ಕುಟುಂಬವೊಂದು ಜಾಣತನದಿಂದ ಜಾಗ ಖಾಲಿ ಮಾಡಿರುವ ಆಘಾತಕಾರಿ ಘಟನೆಯೊಂದು ಮುನ್ನೆಲೆಗೆ ಬಂದಿದೆ.

​ಸ್ಥಳೀಯ ‘ಪೊಜೊಲೇರಿಯಾ ಎಲ್ ಜೀನ್’ (Pozoleria El Gene) ಎಂಬ ರೆಸ್ಟೋರೆಂಟ್‌ನಲ್ಲಿ ಈ ಘಟನೆ ನಡೆದಿದ್ದು, ಇದರ ಸಿಸಿ ಟಿವಿ ದೃಶ್ಯಾವಳಿಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿವೆ.

​ನಡೆದಿದ್ದೇನು?

ರೆಸ್ಟೋರೆಂಟ್‌ಗೆ ಬಂದ ಕುಟುಂಬವೊಂದು ತಮಗೆ ಬೇಕಾದ ಆಹಾರವನ್ನು ಆರ್ಡರ್ ಮಾಡಿ ಸೇವಿಸಿದೆ. ಆದರೆ, ಬಿಲ್ ಪಾವತಿಸುವ ಸಮಯ ಹತ್ತಿರವಾಗುತ್ತಿದ್ದಂತೆ, ಕುಟುಂಬದ ಸದಸ್ಯರು ಒಬ್ಬೊಬ್ಬರಾಗಿ ಹೋಟೆಲ್‌ನಿಂದ ಹೊರಗೆ ಹೋಗಲು ಆರಂಭಿಸಿದ್ದಾರೆ. ಕೊನೆಯದಾಗಿ ಉಳಿದುಕೊಂಡಿದ್ದ, ಆ ಕುಟುಂಬದ ಮುಖ್ಯಸ್ಥ ಎನ್ನಲಾದ ವ್ಯಕ್ತಿಯಂತೂ ಯಾರಿಗೂ ತಿಳಿಯದಂತೆ ಹೋಟೆಲ್‌ನಿಂದ ದಿಢೀರನೆ ಓಡಿ ಪರಾರಿಯಾಗಿದ್ದಾನೆ!

​ಗ್ರಾಹಕರ ಈ ವರ್ತನೆಯಿಂದ ಕಂಗೆಟ್ಟ ಹೋಟೆಲ್ ಮಂಡಳಿ, ಸಿಸಿ ಟಿವಿ ದೃಶ್ಯಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ಅವರ ಬೇಜವಾಬ್ದಾರಿತನವನ್ನು ಸಾರ್ವಜನಿಕವಾಗಿ ಬಯಲಿಗೆಳೆದಿದೆ. ನೆಟ್ಟಿಗರು ಈ ಕುಟುಂಬದ ನಡೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ.

Edited By : Vijay Kumar
PublicNext

PublicNext

13/06/2026 05:41 pm

Cinque Terre

9.15 K

Cinque Terre

0

ಸಂಬಂಧಿತ ಸುದ್ದಿ