ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

VIDEO : ಭೀಕರ ಗೂಳಿ ದಾಳಿಗೆ ವೃದ್ಧ ಬಲಿ - ಹೃದಯವಿದ್ರಾವಕ ಘಟನೆ ವೈರಲ್!

ರಾಜಸ್ಥಾನ : ಜಾಲೋರ್ ಜಿಲ್ಲೆಯ ಚಿತಲ್ವಾನಾ ಗ್ರಾಮದಲ್ಲಿ ಭೀಕರ ದುರಂತವೊಂದು ಸಂಭವಿಸಿದೆ. ತಮ್ಮ ಮನೆಯ ನಡೆದುಕೊಂಡು ಹೋಗುತ್ತಿದ್ದ ವೃದ್ಧನ ಮೇಲೆ ಗೂಳಿಯೊಂದು ಮಾರಣಾಂತಿಕ ದಾಳಿ ನಡೆಸಿದೆ.

ಗೂಳಿಯು ರಜಪೂತ್ ಎಂಬಾತ ಅಜ್ಜನನ್ನು ಮೇಲಕ್ಕೆ ಎಸೆದು ಗಂಭೀರ ಗಾಯಗಳನ್ನುಂಟು ಮಾಡಿದ ಪರಿಣಾಮ ಸ್ಥಳದಲ್ಲೇ ಜೀವ ಬಿಟ್ಟಿದ್ದಾರೆ.

ಬೀದಿ ಜಾನುವಾರು ಹಾವಳಿಗೆ ಅಮಾಯಕ ಜನರು ಬಲಿಯಾಗುತ್ತಿದ್ದು, ಇಂತಹ ದುರ್ಘಟನೆಗಳು ಇತ್ತೀಚೆಗೆ ನಿರಂತರವಾಗಿ ಹೆಚ್ಚುತ್ತಿವೆ. ಸಾರ್ವಜನಿಕರ ಸುರಕ್ಷತೆಗೆ ಹೊಣೆ ಯಾರು ಎಂಬ ಪ್ರಶ್ನೆ ಹುಟ್ಟಿಕೊಂಡಿದ್ದು, ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಸದ್ಯ ಈ ಘಟನೆಯ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Edited By : Abhishek Kamoji
PublicNext

PublicNext

12/06/2026 07:00 pm

Cinque Terre

38.26 K

Cinque Terre

0

ಸಂಬಂಧಿತ ಸುದ್ದಿ