ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

VIDEO : ಎಲ್ಲಿಂದಲೋ ಬಂದ ಕಾರು ಬಸ್‌ಗೆ ಡಿಕ್ಕಿ, ಅಚ್ಚರಿ ಮೂಡಿಸಿದ ದೃಶ್ಯ!

ತಿರುವು ರಸ್ತೆಯಲ್ಲಿ ಸಾಗುತ್ತಿದ್ದ ಬಸ್‌ಗೆ, ಇದ್ದಕ್ಕಿದ್ದಂತೆ ಎಲ್ಲಿಂದಲೋ ಬಂದ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಬಸ್‌ ದಿಢೀರ್ ನಿಂತ ಘಟನೆ ನಡೆದಿದೆ. ಈ ಅಪಘಾತದ ಸಿಸಿಟಿವಿ ದೃಶ್ಯಾವಳಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, @maniaUFO ಎಂಬ ಖಾತೆಯಿಂದ ಹಂಚಿಕೊಳ್ಳಲಾದ ಈ ವಿಡಿಯೋ ವೀಕ್ಷಕರಲ್ಲಿ ತೀವ್ರ ಗೊಂದಲ ಮೂಡಿಸಿದೆ.

ಆದರೆ, ಸಿಸಿಟಿವಿ ದೃಶ್ಯಾವಳಿಯನ್ನು ಸೂಕ್ಷ್ಮವಾಗಿ ಗಮನಿಸಿದಾಗ, ಅಪಘಾತಕ್ಕೀಡಾದ ಕಾರು ಬಸ್‌ ಅನ್ನು ಅತಿ ಹತ್ತಿರದಿಂದ ಹಿಂಬಾಲಿಸುತ್ತಿರುವುದು ಸ್ಪಷ್ಟವಾಗಿ ಕಂಡುಬರುತ್ತದೆ. ಕಾರು ಚಾಲಕ ಎಡಭಾಗದಿಂದ ಅಜಾಗರೂಕತೆಯಿಂದ ಓವರ್‌ಟೇಕ್ ಮಾಡಲು ಪ್ರಯತ್ನಿಸಿದಾಗ, ಮೊದಲು ರಸ್ತೆಬದಿಯಲ್ಲಿದ್ದ ಕೈಪಂಪ್‌ಗೆ ಡಿಕ್ಕಿ ಹೊಡೆದಿದೆ. ತದನಂತರ, ಅದರ ಹಿಂಭಾಗವು ಬಸ್‌ಗೆ ಬಲವಾಗಿ ಡಿಕ್ಕಿ ಹೊಡೆದಿರುವುದು ಸ್ಪಷ್ಟವಾಗಿ ದಾಖಲಾಗಿದೆ.

Edited By : Abhishek Kamoji
PublicNext

PublicNext

12/06/2026 07:53 pm

Cinque Terre

19.42 K

Cinque Terre

0

ಸಂಬಂಧಿತ ಸುದ್ದಿ