ಚಂಡೀಗಢ : ಪಂಚತಾರಾ ಹೋಟೆಲ್‌ನ ಭವ್ಯ ಅಡುಗೆಮನೆಯಿಂದ ಹೊರಬಂದು, ಒಂದು ಮರದ ಕೆಳಗೆ ತನ್ನ ಅಡುಗೆಯ ಲೋಕವನ್ನು ಸೃಷ್ಟಿಸಿಕೊಂಡಿದ್ದಾರೆ ಮಾಜಿ ಶೆಫ್ ಅಭೀಲಾಷ್.
ಮ್ಯಾರಿಯಟ್‌ನಂತಹ ಪ್ರತಿಷ್ಠಿತ ಹೋಟೆಲ್‌ನಲ್ಲಿ ಶೆಫ್ ಆಗಿ ಕಾರ್ಯನಿರ್ವಹಿಸಿದ್ದ ಇವರು, ತಮ್ಮ ಅಜ್ಜನ ಸಾಂಪ್ರದಾಯಿಕ ಧಾಬಾದ ಪರಂಪರೆಯನ್ನು ಮುಂದುವರಿಸಲು ಕಾರ್ಪೊರೇಟ್ ಜೀವನವನ್ನು ತ್ಯಜಿಸುವ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ.
ಯಾವುದೇ ಕೃತಕ ರಾಸಾಯನಿಕಗಳು ಅಥವಾ ಶಾರ್ಟ್‌ಕಟ್‌ಗಳನ್ನು ಬಳಸದೆ, ಅಭೀಲಾಷ್ ತೆರೆದ ತಂದೂರ್‌ನಲ್ಲಿ ಎಲ್ಲವನ್ನೂ ತಾಜಾವಾಗಿ, ಅತ್ಯಂತ ನೈಜ ಶೈಲಿಯಲ್ಲಿ ತಯಾರಿಸುತ್ತಾರೆ. ಸದ್ಯ ಅವರ ಕೈರುಚಿಗೆ ಮನಸೋತ ಜನ ಮರದ ನೆರಳಲ್ಲಿ ರುಚಿ ಸವಿಯಲು ಮುಗಿಬಿದ್ದಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
PublicNext
12/06/2026 04:02 pm
LOADING...